ಬೆಂಗಳೂರು: ಈ ವರ್ಷ ಹೊಸ ವರ್ಷವನ್ನು ಭರ್ಜರಿಯಾಗಿ ಪಾರ್ಟಿ ಮಾಡುವ ಮೂಲಕ ವೆಲ್ ಕಮ್ ಮಾಡಿಕೊಳ್ಳಬೇಕು ಎಂದು ಸಿದ್ಧರಾಗುತ್ತಿದ್ದ ಯುವಜನರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಾಗಿರುವ ಹಿನ್ನೆಲೆಯಲ್ಲಿ ಯುವಜನತೆ ತಂಡೋಪತಂಡವಾಗಿ ಪಕ್ಕದ ಗೋವಾ ಮತ್ತು ಪಾಡಿಚೆರಿ ವಲಸೆ ಹೋಗುತ್ತಿದ್ದಾರೆ.
ರಾಜ್ಯದಲ್ಲಿ ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆಯ ಬಳಿಕ ಎಲ್ಲಾ ಬಂದ್ ಆಗಲಿದೆ. ಎಂಜಿ ರೋಡ್ ಮತ್ತು ಬ್ರಿಗೇಡ್ ರೋಡ್ ನಲ್ಲಿ ಹೊಸ ವರ್ಷಾಚರಣೆಗೆ ಅನುಮತಿ ಇಲ್ಲ. ಕ್ಲಬ್ ಮತ್ತು ಪಬ್ ಗಳಲ್ಲಿ ಶೇ. 50 ರಷ್ಟು ಜನರಿಗೆ ಮಾತ್ರ ಅವಕಾಶ ಇದೆ. ನಗರದ ಹೊರವಲಯದಲ್ಲಿ ಪಾರ್ಟಿ ಮಾಡುವಂತಿಲ್ಲ. ಜೊತೆಗೆ ಈ ಬಾರಿ ವೀಕೆಂಡ್ ನಲ್ಲಿ ನ್ಯೂ ಇಯರ್ ಬಂದಿರುವುದರಿಂದ ಇಯರ್ ಎಂಡ್ ಪಾರ್ಟಿಗೆ ಭಾರಿ ಡಿಮ್ಯಾಂಡ್ ಇದೆ. ಆದರೆ ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ಸೀಮಿತ ಅವಕಾಶ ಇರುವ ಹಿನ್ನೆಲೆಯಲ್ಲಿ ನ್ಯೂ ಇಯರ್ ಪಾರ್ಟಿಗಳು ಹೊರ ರಾಜ್ಯಗಳಿಗೆ ಶಿಫ್ಟ್ ಆಗುತ್ತಿವೆ.
ಇದನ್ನೂ ಓದಿ: ಕೆಲಸಕ್ಕೆಂದು ಬಂದ ನರ್ಸ್ ರಾತ್ರೋ ರಾತ್ರಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನ ಕದ್ದು ಎಸ್ಕೇಪ್..
ಯುವಜನರ ದಂಡು ಹೊಸ ಜೋಶ್ ಗಾಗಿ ಗೋವಾ ಮತ್ತು ಪಾಂಡಿಚೆರಿಗೆ ಕಡೆಗೆ ಮುಖ ಮಾಡಿದ್ದಾರೆ. ಇದಕ್ಕಾಗಿ ಬೈಕ್, ಕಾರು, ರೈಲು, ಬಸ್ಸು, ವಿಮಾನಗಳ ಮೂಲಕ ತೆರಳುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಸುಮಾರು 10 ಲಕ್ಷ ಜನರು ಸಿಲಿಕಾನ್ ಸಿಟಿಯಿಂದ ಪಾರ್ಟಿ ಮಾಡಲು ಹೊರ ರಾಜ್ಯಗಳಿಗೆ ತೆರಳುತ್ತಿದ್ಧಾರೆ.
ಖಾಸಗಿ ಬಸ್ ಗಳಿಗೆ ಫುಲ್ ಡಿಮ್ಯಾಂಡ್
ಹೊಸ ವರ್ಷಾಚರಣೆಗಾಗಿ ಹೊರ ರಾಜ್ಯಗಳತ್ತ ಯುವಜನತೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಗೋವಾ, ಗೋಕರ್ಣ, ಪಾಂಡಿಚೇರಿ, ಕೇರಳದತ್ತ ತೆರಳುವ ಬಸ್ ಗಳು ಫುಲ್ ರಷ್ ಆಗಿವೆ. ಈ ಮೊದಲು ಗೋವಾಗೆ ಪ್ರತಿ ದಿನ 5-10 ಬಸ್ ಗಳು ಬಕ್ ಆಗುತ್ತಿದ್ದವು, ಆದರೆ ಈಗ 25-30 ಖಾಸಗಿ ಬಸ್ ಗಳು ಬುಕ್ ಆಗುತ್ತಿವೆ. ಇನ್ನು ಗೋಕರ್ಣಕ್ಕೂ 12-15 ಬಸ್ ಗಳೂ ಬುಕ್ ಆಗುತ್ತಿವೆ.
ಇದೇ ವೇಳೆ ಗೋವಾಗೆ ಸಾಮಾನ್ಯ ದಿನಗಳಲ್ಲಿ 1000 ರೂ.ನಿಂದ 1200 ರೂ. ಇದ್ದ ಟಿಕೆಟ್ ದರ ಈಗ 2000 ರೂನಿಂದ 2200 ರೂ. ಏರಿಕೆಯಾಗಿದೆ. ಇನ್ನು ಡಿಸೆಂಬರ್ 30-31 ರಂದು ಟಿಕೆಟ್ ದರ ಇನ್ನೂ ಹೆಚ್ಚಿದೆ.