ಬೆಂಗಳೂರು: ಬೆಂಗಳೂರಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಲೇಡಿ ಡ್ರೈವರ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದು, ಅದನ್ನ ಪ್ರಶ್ನಿಸಿದ್ದಕ್ಕೆ ಯುವತಿ ಹುಚ್ಚಾಟ ಮೆರೆದಿದ್ದಾಳೆ.
ಯುವತಿ ಬೈಕ್ ಸವಾರನಿಗೆ ಮಿಡ್ಲ್ ಫಿಂಗರ್ ತೋರಿಸಿದ್ದು, ಯುವತಿಯ ಅಸಭ್ಯ ವರ್ತನೆyನ್ನ ಜನ ಪ್ರಶ್ನಿಸಲು ಮುಂದಾಗಿದ್ದಾರೆ. ಈ ವೇಳೆ ಹೆದರಿದ ಯುವತಿ ಏಕಾಏಕಿ ಕಾರು ಚಾಲನೆ ಮಾಡಿದ್ದು, ಈ ಹಿನ್ನೆಲೆ ಬೈಕ್ ಸವಾರ ಕಾರ್ ಬ್ಯಾನೆಟ್ ಮೇಲೆ ಹತ್ತಿ ಪ್ರಶ್ನೆ ಮಾಡಿದ್ದಾನೆ. ಕಾರ್ ಬ್ಯಾನೆಟ್ ಮೇಲೆ ಹತ್ತಿದ್ರೂ ಕೇರ್ ಮಾಡದ ಯುವತಿ , 2 ಕಿಲೋ ಮೀಟರ್ ಬೈಕ್ ಸವಾರನನ್ ಹೊತ್ತೊಯ್ದಿದ್ದಾಳೆ. ಬೆಂಗಳೂರಿನ ಉಲ್ಲಾಳ ರಸ್ತೆಯ ಮಂಗಳೂರು PU ಕಾಲೇಜ್ ಬಳಿ ಇಂದು ಬೆಳಗ್ಗೆ 10:30ರ ಸುಮಾರಿಗೆ ಈ ಘಟನೆ ನಡೆದಿದೆ.
ಇದನ್ನೂ ಓದಿ:ಹೆಚ್.ವಿಶ್ವನಾಥ್ ಸದ್ಯದಲ್ಲೇ ಕಾಂಗ್ರೆಸ್ ಸೇರ್ತಾರೆ :ಕೆಪಿಸಿಸಿ ಅಧ್ಯಕ್ಷ ಡಿಕೆಶಿ..!