ಬೆಂಗಳೂರು: ಗಣೇಶ ಹಬ್ಬದ ಸಂಭ್ರಮದಲ್ಲಿ ಲಂಕೆ ಸಿನಿಮಾ ರಿಲೀಸ್ ಆಗಿ ಒಳ್ಳೆ ಓಪನಿಂಗ್ ಪಡ್ಕೊಂಡಿದೆ.. 50% ಅಕ್ಯುಪೆನ್ಸಿ ಇದ್ರೂ ಥಿಯೇಟರ್ಗಳಲ್ಲಿ ಯೋಗಿ ಆರ್ಭಟ ಜೋರಾಗಿದೆ.. ಆ್ಯಕ್ಷನ್ ಎಂಟರ್ಟ್ರೈನರ್ ಲಂಕೆ ಸಿನಿಮಾಕ್ಕೆ ಪ್ರೇಕ್ಷಕರು ಬಹುಪರಾಕ್ ಹೇಳ್ತಿದ್ದಾರೆ.. ಲಂಕೆ ಚಿತ್ರದ ಫಸ್ಟ್ ಡೇ ಫಸ್ಟ್ ರಿಪೋರ್ಟ್ ಇಲ್ಲಿದೆ ಓದಿ..
ಇದನ್ನೂ ಓದಿ: ಸೂಟ್ಕೇಸ್ ಹಿಡಿದು ರಾಕಿ ಮನೆ ಮುಂದೆ ಪ್ರೊಡ್ಯೂಸರ್ಸ್ ಕ್ಯೂ..! ಬಾಲಿವುಡ್ ಕಾ ಬಾಪ್ ಗೂ ನೋ ಅಂದ್ರು ಯಶ್..!
ಥಿಯೇಟರ್ ಅಂಗಳದಲ್ಲಿ ಯೋಗಿ ‘ಲಂಕೆ’ ಭರ್ಜರಿ ಕಮಾಲ್.. ರಾಜ್ಯಾದ್ಯಂತ ಗ್ರ್ಯಾಂಡ್ ಆಗಿ ಎಂಟ್ರಿ ಆಗಿರೋ ಲಂಕೆ ದರ್ಬಾರ್..!
ಇದನ್ನೂ ಓದಿ: ಟಾಲಿವುಡ್ನಲ್ಲಿ ‘ಮೆಸ್ಟ್ರೋ’ ಮೂಲಕ ಹವಾ ಎಬ್ಬಿಸೋಕೆ ರೆಡಿಯಾಗ್ತಿದ್ದಾರೆ ಕನ್ನಡದ ಚೆಲುವೆ ನಭಾ ನಟೇಶ್…
ಕೊರೋನಾ ಆರ್ಭಟದ ನಡುವೆ ಸೈಲೆಂಟ್ ಆಗಿದ್ದ ಗಾಂಧಿನಗರದಲ್ಲಿ ಲಂಕೆ ಸಿನಿಮಾ ಸೌಂಡ್ ಮಾಡ್ತಿದೆ.. ರಾಮ್ ಪ್ರಸಾದ್ ನಿರ್ದೇಶನದ ಆ್ಯಕ್ಷನ್ ಸಿನಿಮಾದಲ್ಲಿ ಲೂಸ್ ಮಾದ ಯೋಗಿ, ಕೃಷಿ ತಾಪಂಡ, ಕಾವ್ಯ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಲಂಕೆ ಚಿತ್ರ ರಾಜ್ಯಾದ್ಯಂತ 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ ಆರ್ಭಟಿಸುತ್ತಿದೆ. ಇನ್ನು ಬೆಂಗಳೂರಿನ ಅನುಪಮ ಥಿಯೇಟರ್ನಲ್ಲಿ ಲಂಕೆ ದರ್ಬಾರ್ ಜೋರಾಗಿದ್ದು, ಸಿನಿಮಾ ನೋಡಿದ ಸಿನಿಪ್ರಿಯರು ಬಹುಪರಾಕ್ ಹಾಕಿದ್ದಾರೆ.
ಇದೊಂದು ಆ್ಯಕ್ಷನ್ ಸ್ಟೋರಿಯಾಗಿದ್ದು, ಔಟ್ ಎಂಡ್ ಔಟ್ ಕಮರ್ಷಿಯಲ್ ಸಿನಿಮಾವಾಗಿದೆ. ಇದ್ರಲ್ಲಿ ಯೋಗಿ ರಾಮನ ತೇಜಸ್ಸು, ರಾವಣನ ವರ್ಚಸ್ಸು ಇದ್ದು, ಸನ್ನಿವೇಶಕ್ಕೆ ತಕ್ಕಂತೆ ಯೋಗಿ ಪಾತ್ರ ಬದಲಾಗುತ್ತದೆ. ಇನ್ನು ಯೋಗಿಗೆ ನಾಯಕಿಯರಾಗಿ ಕೃಷಿತಪಾಂಡ ಹಾಗೂ ಕಾವ್ಯ ಶೆಟ್ಟಿ ಸಖತ್ ಕಲರ್ಫುಲ್ ಆಗಿ ನಟಿಸಿದ್ದು, ಕಾವ್ಯ ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಮುಖ್ಯ ಪಾತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ದಿವಂಗತ ಸಂಚಾರಿ ವಿಜಯ್ ಹಾಗೂ ಎಸ್ತಾರ್ ನರೋನ ಬಣ್ಣ ಹಚ್ಚಿದ್ದಾರೆ.
ಲಂಕೆ ಚಿತ್ರದಲ್ಲಿ ರಾಮನಾಗಿದ್ದುಕೊಂಡೇ ರಾವಣನಾಗಿ ಲೂಸ್ ಮಾದ ಯೋಗಿ ಅಬ್ಬರಿಸೋಕೆ ಬರ್ತಿರೋದು ವಿಶೇಷ.. 60-70ರ ದಶಕದ ಕಥೆಯ ಜೊತೆಗೆ ಇವತ್ತಿನ ಕಥೆಯನ್ನು ಸೇರಿಸಿ, ಲಂಕೆ ಚಿತ್ರವನ್ನ ಕಟ್ಟಿಕೊಟ್ಟಿದ್ದಾರೆ ರಾಮ್ಪ್ರಸಾದ್.. ಬೆಂಗಳೂರಿನ ಸುತ್ತಮುತ್ತಾ ಬಹುತೇಕ ಚಿತ್ರೀಕರಣ ನಡೆದಿದೆ.. ಆ ಲಂಕೆಯಲ್ಲಿ ರಾಮ ಇದ್ರೆ, ಈ ಲಂಕೆಯಲ್ಲಿ ರಾಮ ಹಾಗೂ ರಾವಣನಾಗಿ ಯೋಗಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ಅಂದ್ಹಾಗೆ ಈ ಸಿನಿಮಾದಲ್ಲಿ ರಾಮಾಯಣದ ಮಾದರಿಯಲ್ಲೇ ಈ ಕಥೆ ಮತ್ತು ಪಾತ್ರಗಳು ಇದ್ದು, ಪ್ರೇಕ್ಷಕರನ್ನ ಸಖತ್ ರಂಜಿಸುತ್ತದೆ. ಪಟೇಶ್ ಶ್ರೀನಿವಾಸ್ ಅವ್ರ ಜೊತೆ ಸೇರಿ ನಿರ್ದೇಶಕರೇ ಲಂಕೆ ಸಿನಿಮಾವನ್ನು ನಿರ್ಮಾಣ ಸಹ ಮಾಡಿದ್ದಾರೆ.. ರಮೇಶ್ ಬಾಬು ಛಾಯಾಗ್ರಹಣ, ಕಾರ್ತಿಕ್ ಶರ್ಮಾ ಸಂಗೀತ ಲಂಕೆ ಚಿತ್ರಕ್ಕಿದೆ..
ಒಟ್ನಲ್ಲಿ ಕೊರೊನಾಗೂ ಜಗ್ಗದೇ 200ಕ್ಕೂ ಅಧಿಕ ಚಿತ್ರಮಂದಿರಗಲ್ಲಿ ಯೋಗಿ ಲಂಕೆ ಸಿನಿಮಾ ಅಬ್ಬರಸಿ ಆರ್ಭಟಿಸುತ್ತಿದೆ. ಯೋಗಿ ಫ್ಯಾನ್ಸ್ ಗಣೇಶ ಹಬ್ಬದ ಜೊತೆ ಲಂಕೆ ಹಬ್ಬವನ್ನ ಸೆಲಬ್ರೇಟ್ ಮಾಡ್ತಿದ್ದಾರೆ.