ಬೆಂಗಳೂರು: ಯಲಹಂಕ MLA ವಿಶ್ವನಾಥ್ ಕೊಲೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಕೆ ನಡೆಸುತ್ತಿದ್ದು, ಪೊಲೀಸರು ಕುಳ್ಳ ದೇವರಾಜ್ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕುಳ್ಳ ದೇವರಾಜ್ ಬಳಕೆ ಮಾಡುತ್ತಿದ್ದ ಎರಡೂ ಮೊಬೈಲ್ ವಶಕ್ಕೆ ಪಡೆಯಲಾಗಿದ್ದು, ಕುಳ್ಳ ದೇವರಾಜ್ ಮೊದಲೇ ಒಂದು ಮೊಬೈಲ್ ಬಚ್ಚಿಟ್ಟಿದ್ದ. ಮನೆ ತಲಾಶ್ ಮಾಡುವ ವೇಳೆ ಪೊಲೀಸರಿಗೆ ಮೊಬೈಲ್ ಸಿಕ್ಕಿದ್ದು, ಎರಡೂ ಮೊಬೈಲ್ಗಳಲ್ಲಿ ಕೊಲೆ ಸಂಚಿನ ವಿಡಿಯೋಗಳು ಲಭ್ಯವಾಗಿಲ್ಲ. ಕುಳ್ಳ ದೇವರಾಜ್ 2008ರಲ್ಲೇ ಪೊಲೀಸ್ ಅತಿಥಿಯಾಗಿದ್ದು, 2011, 2012ರಲ್ಲಿ ಗಲಾಟೆ ಪ್ರಕರಣಗಳಲ್ಲೂ ಭಾಗಿಯಾಗಿದ್ದ. ಸೈಟ್ ವಿಚಾರಕ್ಕೆ ಮೂಲ ಮಾಲೀಕರ ಮೇಲೆ ದೇವರಾಜ್ ಗ್ಯಾಂಗ್ ಹಲ್ಲೆ ನಡೆಸಿದ್ದು, 2019ರಲ್ಲಿ ಜಾಗದ ವಿಚಾರಕ್ಕೆ ದೇವರಾಜ್ ಮೇಲೆ ಮತ್ತೊಂದು ಕೇಸ್ ದಾಖಲಾಗಿದೆ. ಸಾಲು-ಸಾಲು ಅಪರಾಧ ಕೃತ್ಯಗಳಲ್ಲಿ ದೇವರಾಜ್ ಭಾಗಿಯಾಗಿದ್ದು, MLA ಕೊಲೆ ಸಂಚು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ:#Flashnews ಕಿರಿಕ್ ಕೀರ್ತಿ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ …! ಹಲ್ಲೆಗೆ ಕಾರಣವೇನು ಗೊತ್ತಾ..?