ಬೆಂಗಳೂರು: ಬಿಜೆಪಿ ಪಕ್ಷಕ್ಕೆ ಯಡಿಯೂರಪ್ಪನವರೇ ಶಕ್ತಿ, ಶಿಕಾರಿಪುರದ ಅಭಿವೃದ್ಧಿಯ ಹರಿಕಾರರು ಎಂದು ಬಿಎಸ್ವೈರನ್ನು ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಹೆಚ್. ಸಿ ತಮ್ಮೇಶ್ ಗೌಡ ಹಾಡಿ ಹೊಗಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇವತ್ತು ನಿಜವಾಗಿಯೂ ನಮ್ಮ ಕ್ಷೇತ್ರಕ್ಕೆ ಕಾಯಕಯೋಗಿ ಯಡಿಯೂರಪ್ಪ ನವರು ಬಂದಿದ್ದಾರೆ. ಯಾವುದೇ ಕಾರ್ಯಕ್ರಮಕ್ಕೆ ಕರೆದ್ರು ಯಡಿಯೂರಪ್ಪನವರು ಬರ್ತಾರೆ,ಬಿಜೆಪಿ ಪಕ್ಷಕ್ಕೆ ಯಡಿಯೂರಪ್ಪ ನವರೇ ಶಕ್ತಿ, ಇವತ್ತು ನಾನು ಇಲ್ಲಿ ಕಾರ್ಯಕ್ರಮ ಮಾಡುತ್ತಿರೋದು ನನ್ನ ಪುಣ್ಯ, ಯಾವುದೇ ವ್ಯಕ್ತಿ ಒಂದು ಕಾರ್ಯಕ್ರಮ ಮಾಡಬೇಕು ಅಂದ್ರೆ ಅದಕ್ಕೆ ಒಂದು ತಂಡ ಕಾರಣ,ನಮ್ಮ ವಿಧಾನಸಭಾ ಕ್ಷೇತ್ರ ಯಾಕೆ ರಾಜ್ಯದಲ್ಲಿ ಮಾದರಿ ಕ್ಷೇತ್ರ.
ಶಿಕಾರಿಪುರದ ಅಭಿವೃದ್ಧಿಯ ಹರಿಕಾರರು ನಮ್ಮ ಕಾರ್ಯಕ್ರಮಕ್ಕೆ ಬಂದಿದ್ದಾರೆ, ನಮ್ಮ ಕೇಸರಿ ಫೌಂಡೇಶನ್ ಸುಮಾರು 2 ವರ್ಷದಿಂದ ಕಾರ್ಯ ಶುರುಮಾಡಿದೆ. ಸುಮಾರು 300 ಜನರ ತಂಡ ನಮ್ಮ ಫೌಂಡೇಶನ್ ಗೆ ಭದ್ರ ಬುನಾದಿಯಾಗಿದೆ, ಕೋವಿಡ್ ಸಂದರ್ಭದಲ್ಲಿ ಯಡಿಯೂರಪ್ಪನವರು ಸುಮ್ನೆ ಕೂಡಲಿಲ್ಲ,ಕೋವಿಡ್ ಬಂದ್ರು ಪ್ರತಿನಿತ್ಯ ಜನರ ಜೊತೆಗೆ ವಿಡಿಯೋ ಸಂವಾದ ಮೂಲಕ ಕಷ್ಟ ಆಲಿಸಿದ್ರು, ಅವರ ಸ್ಫೂರ್ತಿಯೇ ನನಗೆ ಈ ಸಮಾಜ ಸೇವೆಗೆ ಶಕ್ತಿ ತಂದಿದೆ. ನಾನು ಕೋವಿಡ್ ಸಂಧರ್ಭದಲ್ಲಿ ಶಕ್ತಿ ಮೀರಿ ಸೇವೆಗೆ ಮಾಡಿದ್ದೇನೆ.
ಕಳೆದ ದಸರಾ ಉತ್ಸವ ನಮ್ಮ ಕ್ಷೇತ್ರದಲ್ಲಿ ಮಾಡಿದ್ವಿ, ದಸರಾ ಉತ್ಸವಕ್ಕೆ ನಮ್ಮ ಬಿಜೆಪಿ ಯೂತ್ ಐಕಾನ್ ವಿಜಯೇಂದ್ರ ರವರು ಬಂದಿದ್ರು, ಅವರು ರಾಜ್ಯಕ್ಕೆ ಮಾದರಿಯಾಗಿದ್ರು ಅದೇ ರೀತಿ ನಮ್ಮ ಕ್ಷೇತ್ರ ಕೂಡ ರಾಜ್ಯಕ್ಕೆ ಮಾದರಿಯಾಗಲಿ, ನವ ಬ್ಯಾಟರಾಯನಪುರ ಕಟ್ಟಲು ನನಗೆ ಸಹಾಯ ಮಾಡಿ, ಆ ಭಗವಂತ ನಿಮಗೆ ಆಶೀರ್ವಾದ ಮಾಡ್ತಾರೆ ನೀವು ನನಗೆ ಆಶೀರ್ವಾದ ಮಾಡಿ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಎಮ್ಮೆಗಳ ವಿರುದ್ಧ ದೂರು ನೀಡಿದ ಟೆಕ್ಕಿಗಳು.. ಯಾಕೆ ಗೊತ್ತಾ..?