ಬೆಂಗಳೂರು : BS ಯಡಿಯೂರಪ್ಪ ಅವ್ರು ರಾಹುಲ್ ಗಾಂಧಿ ಬಚ್ಚಾ ಎಂದಿದ್ದು ಸರಿಯಿದೆ..ರಾಜಕೀಯದಲ್ಲಿ ‘ಕೈ’ ನಾಯಕ ರಾಹುಲ್ ಗಾಂಧಿ ಬಚ್ಚಾನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕಿಡಿಕಾರಿದ್ಧಾರೆ.
ವಿಧಾನಸೌಧದಲ್ಲಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿ ರಾಜಕೀಯದಲ್ಲಿ ರಾಹುಲ್ ಗಾಂಧಿ ಪ್ರಬುದ್ಧತೆ ಇಲ್ಲದ ಭಾರತ್ ಜೋಡೊ ಮಾಡುತ್ತಿದ್ಧಾರೆ. ದಿನ ಒಬ್ಬೊಬ್ಬರನ್ನು ಓಡಿಸ್ತಾರೆ, ಒಂದು ದಿನ ಸಿದ್ದರಾಮಯ್ಯ, ಮತ್ತೊಂದು ದಿನ ಡಿಕೆ ಶಿವಕುಮಾರ್ನಾ. ಭಾರತ್ ಜೋಡೊ ಹಾಸ್ಯಾಸ್ಪದವಾಗಿದೆ. ಕಾಶ್ಮೀರದಲ್ಲಿ ಹಿಂದೂ ಪಂಡಿತರ ಕೊಲೆ ಆಗುವಾವಗ ಎಲ್ಲೊಗಿದ್ರು ಕಾಂಗ್ರೆಸ್ ಎಂದು ಗುಡುಗಿದ್ಧಾರೆ.
ಹಾವೇರಿಯಲ್ಲಿ ಮುಸ್ಲಿಂ ಗೂಂಡಾಗಳು ಆರ್ ಎಸ್ ಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ.. ಇಂದು ಭಾರತ ಅಖಂಡ ಆಗಿರಲು ಕಾರಣ ಆರ್ ಎಸ್ ಎಸ್ ಕಾರ್ಯಕರ್ತರಾಗಿದ್ಧಾರೆ. ಕಾಂಗ್ರೆಸ್ ನಾಯಕರು ಹೀಗೆ ಮುಸ್ಲಿಂ ಗೂಂಡಾಗಳಿಗೆ ಸಪೋರ್ಟ್ ಮಾಡಿದ್ರೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ ಎಂದಿದ್ಧಾರೆ.
ಇದನ್ನೂ ಓದಿ : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ ಡಾ ವೀರೇಂದ್ರ ಹೆಗ್ಗಡೆ…!