ಯಾದಗಿರಿ ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ರಸ್ತೆ ಜಲಾವೃತ ಗೊಂಡಿವೆ. ಮನೆಗಳಿಗೆ ನುಗ್ಗಿದ ನೀರಿನಿಂದಾಗಿ ಜನರು ಪರದಾಡುವಂತಾಗಿದ್ದು. ವರುಣನ ಅರ್ಭಟಕ್ಕೆ ಗ್ರಾಮದ ಜನರು ತಲ್ಲಣರಾಗಿದ್ದಾರೆ.
30ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು ಅವಾಂತರ ಸೃಷ್ಟಿ ಮಾಡಿದ್ದು. ತಡರಾತ್ರಿಯಿಂದ ನಿದ್ದೆ ಮಾಡದೆ ಜನರು ಹೈರಾಣಾಗಿದ್ದಾರೆ.
ಇದನ್ನೂ ಓದಿ : ಸ್ಯಾಂಡಲ್ವುಡ್ ನಟ ಶರಣ್ ಆಸ್ಪತ್ರೆಗೆ ದಾಖಲು..! ಶೂಟಿಂಗ್ ವೇಳೆ ಅನಾರೋಗ್ಯಕ್ಕೀಡಾದ ಶರಣ್..!
ನಗನೂರ ಗ್ರಾಮದ ರಸ್ತೆ ಜಲಾವೃತವಾಗಿದ್ದು, ನಗನೂರ ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ಹಾಗೂ ಖಾನಾಪುರ ಎಸ್ ಎಚ್ ಗ್ರಾಮದಲ್ಲಿ 10 ಮನೆಗಳಿಗೆ ನುಗ್ಗಿದ ನೀರಿನಿಂದಾಗಿ ಜನರ ಪರಿಸ್ಥಿತಿ ಚಿಂತಾಜನಕವಾಗಿದೆ.
ಇದನ್ನೂ ಓದಿ : ನಿನ್ನೆ ವಿಚಾರಣೆಗೆ ಬರ್ತೀನಿ ಎಂದವರು ಯಾಕೆ ಬರ್ಲಿಲ್ಲ..? ಅನುಶ್ರೀ ಮೇಲೆ ಸಿಸಿಬಿ ಅಧಿಕಾರಿಗಳು ಗರಂ..!
ನೀರು ಖಾಲಿ ಮಾಡಲು ಜನರು ಪರದಾಟ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರ, ಖಾನಾಪುರ ಎಸ್ ಗ್ರಾಮದೊಳಗೆ ಮಳೆರಾಯನ ಆರ್ಭಟ ಜೋರಾಗಿದ್ದು ಸಂಪೂರ್ಣ ಜಲಾವೃತಗೊಂಡು ಜನರು ತತ್ತರಿಸಿ ಹೋಗಿದ್ದಾರೆ.
ಇದನ್ನೂ ಓದಿ : ಬಾಲಿವುಡ್ ಡ್ರಗ್ಸ್ ಕೇಸ್ನಲ್ಲಿ ಸಿಲುಕಿ ಬಿದ್ಲ ಡಿಪ್ಪಿ..? ವಿಚಾರಣೆ ನಂತ್ರ ಎನ್ಸಿಬಿ ವಶ ಆಗ್ತಾರಾ ದೀಪಿಕಾ ಪಡುಕೋಣೆ..?