ಅರಣ್ಯವೆಂದರೆ ಅದು ಸಸ್ಯ ಸಂಪತ್ತು. ಈ ನಿಟ್ಟಿನಲ್ಲಿ ಸಿಲಿಕಾನ್ ಸಿಟಿಯಲ್ಲಿ ಬೆಂಗಳೂರು ಹುಡುಗರು ಸಂಸ್ಥೆ ಹಾಗೂ ಬಿಬಿಎಂಪಿ ವತಿಯಿಂದ ಮರಗಳ ಸಂರಕ್ಷಣೆಗಾಗಿ ನಗರದಲ್ಲಿ ಮೊಳೆ ಮುಕ್ತ ಮರ ಎಂದು ವಿನೂತನವಾಗಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ವಿಶ್ವ ಅರಣ್ಯ ದಿನದ ಅಂಗವಾಗಿ ಬೆಂಗಳೂರು ಹುಡುಗರ ತಂಡವು ಪಾಲಿಕೆಯ ಸಹಭಾಗಿತ್ವದೊಂದಿಗೆ ಎಂ.ಜಿ.ರಸ್ತೆಯ ಬಾಲಭವನದಿಂದ ಪಾಲಿಕೆಯವರೆಗೆ “ಮೊಳೆ ಮುಕ್ತ ಮರ” ಎಂಬ ಜಾಗೃತಿ ಕಾಲ್ನಡಿಗೆ ಜಾಥಾ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್, ರೈಲ್ವೆ ಪೊಲೀಸ್ ಎ.ಡಿ.ಜಿ.ಪಿ ಭಾಸ್ಕರ್ ರಾವ್, ಇನ್ನಿತರರು ಭಾಗವಹಿಸಿದ್ದರು. ಈ ಸಂದರ್ಭ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಮಾತನಾಡಿ ನಗರದಾದ್ಯಂತ ಮರಗಳ ಮೇಲೆ ಬಿತ್ತಿಪತ್ರಗಳನ್ನು ಅಂಟಿಸಲು ಹೊಡೆದಿರುವ ಮೊಳೆ, ಸ್ಟ್ಯಾಪ್ಲರ್ ಮೂಲಕ ಪಿನ್ ಹೊಡೆದಿರುವುದನ್ನು ತೆಗೆಯುವ ಕಾರ್ಯ ಯಶಸ್ವಿಯಾಗಿ ನಡೆಸುತ್ತಿರುವುದು ಶ್ಲಾಘನೀಯ ಯಾವ ಕಾರ್ಯಕ್ರಮ/ಯೋಜನೆಯು ಜನರಿಂದ ಸ್ವಯಂ ರೂಪುಗೊಳ್ಳುತ್ತದೆಯೋ ಅದು ಯಶಸ್ವಿಯಾಗಲಿದೆ ಎಂದರು.
ದಿನದಿಂದ ದಿನಕ್ಕೆ ನಗರೀಕರಣದಿಂದ ಸ್ವಚ್ಚಂಧ ಪರಿಸರದ ಮೇಲೆ ಹೊಡೆತ ಹೆಚ್ಚಾಗ್ತದೆ ಇದ್ರ ನಡುವೆ ಬಲಿಷ್ಟವಾಗಿ ರಸ್ತೆಗಳ ಇಕ್ಕೆಲಗಳಲ್ಲಿ ಬೆಳೆದು ನಿಂತಿರೂ ಮರಗಳಿಗೆ ಮೊಳೆ ಹೊಡೆಯೋರೆ ಹೆಚ್ಚಾಗಿದ್ದಾರೆ. ಇವೆಲ್ಲವುಗಳಿಗೆ ಕಡಿವಾಣ ಹಾಕೋದಕ್ಕೆ ಬೆಂಗಳೂರು ಹುಡುಗರು ತಂಡದ ಮುಂದಾಗಿದೆ. ಜತೆಗೆ ಮರಗಳಿಗೆ ಮಳೆ ಹೊಡೆದು ತ್ರೀವವಾದ ಹಾನಿ ಉಂಟಾಗಿ ಪರಿಸರ ಕಲುಷಿತಗೊಳ್ಳುತ್ತಿದೆ. ಇದೆಲ್ಲವನ್ನು ಗಮನಿಸಿ ನಗರದ ಮರಗಳಿಗೆ ಹೊಡೆದಿರೋ ಮೊಳೆ, ಪಿನ್ ತೆಗೆಯುವ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಈವರೆಗೆ 1250 ಮರಗಳಲ್ಲಿ 12 ಕೆ.ಜಿ ಗು ಹೆಚ್ಚು ಮೊಳೆಗಳು, 8 ಕೆ.ಜಿಯಷ್ಟು ಸ್ಟಾಪ್ಲರ್ ಪಿನ್ ತೆಗೆಯಲಾಗಿದೆ ಎಂದು ಬೆಂಗಳೂರು ಹುಡುಗರು ತಂಡದ ಸಂಸ್ಥಾಪಕ ವಿನೋದ್ ಕರ್ತವ್ಯ ತಿಳಿಸಿದರು.
ಒಟ್ಟಾರೆಯಾಗಿ ವಿಶ್ವ ಅರಣ್ಯ ದಿನ ಪ್ರಯುಕ್ತ ಮೊಳೆ ಮುಕ್ತ ಮರ ಎಂಬ ಜಾಗೃತಿ ಜಾಥ ಆಯೋಜಿಸಿ ಜಾಗೃತಿ ಮೂಡಿಸಿದ್ದಾರೆ. ನೀವು ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಮತ್ತಷ್ಟು ಮರ ಗಿಡಗಳನ್ನು ಹೆಚ್ಚೆಚ್ಚು ಉಳಿಸಿ ಬೆಳೆಸಿ ಎಂಬುದು ಎಲ್ಲರ ಆಶಯ.