ಮೈಸೂರು: ಮಹಿಳೆಯೊಬ್ಬರು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಪಿಲಾ ನದಿಗೆ ಬಿದ್ದು ಮೃತಪಟ್ಟಿದ್ಧಾರೆ.
ನಂಜನಗೂಡು ತಾಲೂಕಿನ ಹಲ್ಲಹಳ್ಳಿ ಬಳಿ ಇರುವ ಸಂಗಮದಲ್ಲಿ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆ ನಂಜೇದೇವನಪುರ ಗ್ರಾಮದ ಗಿರೀಶ್ ಎಂಬುವರ ಪತ್ನಿ ಕವಿತಾ(38) ಮೃತ ಮಹಿಳೆ. ಇವರು ಮೈಸೂರು ತಾಲ್ಲೂಕಿನ ದೂರ ಗ್ರಾಮದ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಡಿ ಬಿ ನಾಗರಾಜ್ ಎಂಬುವರ ಪುತ್ರಿ. ಕವಿತಾ ಅವರು ತಮ್ಮ ಪತಿ ಹಾಗೂ ಪುತ್ರಿ ಜೊತೆ ಸಂಗಮಕ್ಕೆ ತೆರಳಿದ್ದರು.
ಇದನ್ನೂ ಓದಿ: ಹಣ ಪಡೆದು ಸ್ಥಾನ ನೀಡುವ ಸಂಸ್ಕೃತಿ ಕಾಂಗ್ರೆಸ್ ನಲ್ಲಿದೆ, ಬಿಜೆಪಿಯಲ್ಲಿಲ್ಲ… ಯು ಟರ್ನ್ ಹೊಡೆದ ಯತ್ನಾಳ್…
ದೇವಾಲಯಕ್ಕೆ ತೆರಳುವ ಮುನ್ನ ಕಪಿಲಾ ನದಿಯಲ್ಲಿ ಕಾಲು ತೊಳೆದುಕೊಳ್ಳಲು ತೆರಳಿದ್ದರು. ಈ ವೇಳೆ ಕವಿತಾ ಅವರು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಸೆಲ್ಫಿ ತೆಗೆದುಕೊಳ್ಳುವಾಗ ಕವಿತಾ ಅವರು ಕಾಲು ಜಾರಿ ಕಪಿಲಾ ನದಿಗೆ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.