ಬೆಂಗಳೂರು : ರಾಜಾಜಿನಗರ ಕಾಂಗ್ರೆಸ್ ಅಭ್ಯರ್ಥಿ ಆಗ್ತಾರಾ MLC ಪುಟ್ಟಣ್ಣ..? ಬಿಜೆಪಿಗೆ ರಿಸೈನ್ ಮಾಡಿ ಕಾಂಗ್ರೆಸ್ಗೆ ಬರ್ತಾರಾ ಪುಟ್ಟಣ್ಣ..? ಈಗಾಗಲೇ ಪುಟ್ಟಣ್ಣ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ಧಾರೆ. ಎಂಎಲ್ಸಿ ಪುಟ್ಟಣ್ಣ ಉಳಿಸಿಕೊಳ್ಳಲು ಬಿಜೆಪಿಯೂ ಪ್ರಯತ್ನ ಮಾಡ್ತಿಲ್ಲ, ಬಿಜೆಪಿ ನಾಯಕರು ಬೇರೆ ಪಕ್ಷದಿಂದ ಕರೆತಂದು ಕೈಸುಟ್ಟುಕೊಂಡಿದ್ಧಾರೆ.
ಈ ಹಿಂದೆ ಡಿಕೆಶಿ ಜತೆ ಚರ್ಚೆ ನಡೆಸಿದ್ದಾಗಲೇ ಪುಟ್ಟಣ್ಣ ಬಿಜೆಪಿ ಕೈಬಿಟ್ಟಿದ್ದು, ಚನ್ನಪಟ್ಟಣ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ಧಾರೆ.
ಕಾಂಗ್ರೆಸ್ ನಾಯಕರು ರಾಜಾಜಿನಗರದಿಂದ ಟಿಕೆಟ್ ಕೊಡುವ ಭರಸವೆ ನೀಡಿದ್ಧಾರೆ. ಬಹುತೇಕ ರಾಜಾಜಿನಗರಕ್ಕೆ ಪುಟ್ಟಣ್ಣ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ. ಜಮೀರ್ ಅಹಮದ್ ಖಾನ್ ಜೊತೆ ಸಿದ್ದು ಭೇಟಿ ಮಾಡಿ ಟಿಕೆಟ್ ಬಗ್ಗೆ ಚರ್ಚೆ ನಡೆಸಿದ್ಧಾರೆ. ಟಿಕೆಟ್ ಕನ್ಫರ್ಮ್ ಮಾಡಿದ ಕೂಡಲೇ MLC ಸ್ಥಾನಕ್ಕೆ ಪುಟ್ಟಣ್ಣ ರಾಜೀನಾಮೆ ನೀಡಲಿದ್ಧಾರೆ. ಪುಟ್ಟಣ್ಣ ಡಿಕೆಶಿ, ಸಿದ್ದರಾಮಯ್ಯ ಮುಂದೆ ಈ ಮಾತು ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪುಟ್ಟಣ್ಣಗೆ ಯಶವಂತಪುರ ಕ್ಷೇತ್ರದ ಆಫರ್ ನೀಡಿದ್ದು, ಪುಟ್ಟಣ್ಣ ರಾಜಾಜಿನಗರ ಕ್ಷೇತ್ರದ ಟಿಕೆಟ್ ನೀಡಿ ಎಂದು ಕೇಳಿದ್ಧಾರೆ. ಮಾಜಿ ಮೇಯರ್ ಪದ್ಮಾವತಿ ರಾಜಾಜಿನಗರದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಇದನ್ನೂ ಓದಿ : ರೌಡಿ ಶೀಟರ್ ಸೈಲೆಂಟ್ ಸುನಿಲ್‌ಗೆ ಬಿಜೆಪಿ ಸೇರ್ಪಡೆಗೆ ಅವಕಾಶವಿಲ್ಲ… ಎಂಟ್ರಿ ಡೋರ್ ಬಂದ್ ಮಾಡಿದ ಸಿಎಂ ಬೊಮ್ಮಾಯಿ, ಅಧ್ಯಕ್ಷ ಕಟೀಲ್…