ಬೆಂಗಳೂರು : ಬ್ಯಾಟರಾಯನಪುರ ರಾಕೇಶ್ ಕೊಲೆ ಕೇಸ್ಗೆ ಭಯಾನಕ ಟ್ವಿಸ್ಟ್ ಸಿಕ್ಕಿದ್ದು, ಗಂಡನಿಗೆ ಲೈಂಗಿಕ ಆಸಕ್ತಿ ಇಲ್ಲವೆಂದು ಗಂಡನನ್ನೇ ಮುಗಿಸಿ ಬಿಟ್ಟಿದ್ದಾಳೆ.
ಪತ್ನಿ ಹಾಗೂ ಆಕೆಯ ಬಾಯ್ ಫ್ರೆಂಡ್ನಿಂದಲೇ ರಾಕೇಶ್ ಹತ್ಯೆ ಮಾಡಲಾಗಿದ್ದು, ಪತಿ ಲೈಂಗಿಕ ಆಸಕ್ತಿ ಕಳೆದುಕೊಂಡಿದ್ರಿಂದ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಳು, ಈ ಅನೈತಿಕ ಸಂಬಂಧ ಪತ್ತೆ ಹಚ್ಷಿದ ಗಂಡನಿಗೇ ಮುಹೂರ್ತ ಇಟ್ಟಿದ್ದಾಳೆ, ಮದ್ಯ ವ್ಯಸನಿಯಾಗಿದ್ದ ಸೆಕ್ಯೂರಿಟಿ ಗಾರ್ಡ್ ರಾಕೇಶ್ಗೆ ಊಟ ತಂದು ಕೊಡುವ ವೇಳೆ ಬಾಬು ಪರಿಚಯವಾಗಿದ್ದು, ಬಾಬು ಜೊತೆಗಿನ ಪರಿಚಯ ನಂತರ ಪ್ರೇಮಕ್ಕೆ ತಿರುಗಿತ್ತು.
ಬಾಬು ಆಗಾಗ ವಡೇರಹಳ್ಳಿಯ ರಾಕೇಶ್ ನಿವಾಸಕ್ಕೆ ಬರುತಿದ್ದ, ಹೀಗಾಗಿ ಪತ್ನಿಗೆ ಪತಿ ರಾಕೇಶ್ ಹಲವು ಬಾರಿ ವಾರ್ನ್ ಮಾಡಿದ್ದ. ನವೆಂಬರ್ 6ರಂದು ನಿದ್ರೆ ಮಂಪರಿನಲ್ಲಿದ್ದಾಗ ರಾಕೇಶ್ ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, ಕೊಲೆ ಬಳಿಕ ನಾಟಕವಾಡಿದ್ದ ರಾಕೇಶ್ ಪತ್ನಿ ದೇವಿ, ಅತಿಯಾಗಿ ಮದ್ಯ ಸೇವಿಸಿ ಎದೆಯುರಿಯಿಂದ ಸಾವು ಎಂದು ನಾಟಕ ವಾಡಿದ್ದಳು.
ಪೊಲೀಸರು ಕತ್ತಿನ ಭಾಗದಲ್ಲಿ ಗಾಯದ ಗುರುತು ಪತ್ತೆ ಮಾಡಿದ್ದರು ಹೀಗಾಗಿ ಕೇಸ್ ದಾಖಲಿಸಿ ಪತ್ನಿಯ ವಿಚಾರಣೆ ಮಾಡಿದ್ದರು, ಈ ಹಿನ್ನೆಲೆ ರಾಕೇಶ್ ಪತ್ನಿ ಹಾಗೂ ಬಾಯ್ಫ್ರೆಂಡ್ ಬಾಬು ಅರೆಸ್ಟ್ ಮಾಡಲಾಗಿದ್ದು, ವಿದ್ಯಾರಣ್ಯಪುರ ಪೊಲೀಸರಿಂದ ತನಿಖೆ ಮುಂದುವರಿದಿದೆ.
ಇದನ್ನೂ ಓದಿ:ದೈನಂದಿನ ರಾಶಿ ಭವಿಷ್ಯ…! 13/11/22