ಚಿಕ್ಕಬಳ್ಳಾಪುರ : ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸುಧಾಕರ್ ತಿರುಗೇಟು ನೀಡಿ, ಜೆಡಿಎಸ್ ಬಿಟ್ಟು ಕಾಂಗ್ರೆಸ್ಗೆ ನೀವ್ಯಾಕೆ ಬಂದ್ರಿ, ನೀವೂ ಆಸೆಯಿಂದಲೇ ಕಾಂಗ್ರೆಸ್ಗೆ ಬಂದಿದ್ದಲ್ವಾ..? ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಮಾತನಾಡಿ, ನನಗೊಂದು ಆಶಯ ಇತ್ತು.. ಹೀಗಾಗಿ ಬಿಜೆಪಿಗೆ ಬಂದೆ, ನಿಮಗೆ ಧಂ.. ತಾಕತ್ತು ಇದ್ದರೆ ದಾಖಲೆ ರಿಲೀಸ್ ಮಾಡಿ. ನಿಮ್ಮ ಸರ್ಕಾರ, ನನ್ನ ಇಲಾಖೆ ಬಗ್ಗೆಯೂ ತನಿಖೆ ಆಗಲಿ. ಜೆಡಿಎಸ್ ಬೆಂಬಲಿಸಿದ್ದಾಗಲೇ ನಾನು ವಿರೋಧಿಸಿದ್ದೇ, ರಾಹುಲ್ ಮುಂದೆ ಕೈ ಕಟ್ಟಿ ನಿಂತಿದ್ದವರು ನೀವು. ಲೋಕಸಭೆ ಎಲೆಕ್ಷನ್ ಮುಗಿದ ಮರು ದಿನ HDK ಇಳಿಸ್ತೀವಿ ಅಂದ್ರಿ, ಸಂಸ್ಕಾರ ಇಲ್ಲದ ನಾಲಗೆಗೆ ಗೌರವ ಇರಲ್ಲ. ಸಿಎಂ ಆದವರು ಕೀಳುಮಟ್ಟದ ಹೇಳಿಕೆ ಕೊಡಬಾರದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಹಾದಿ ಬೀದಿಲಿ ದಂಧೆ ಮಾಡೋರು ಸರ್ಕಾರ ನಡೆಸ್ತಿದ್ದಾರೆ : ಹೆಚ್ ಡಿ ಕುಮಾರಸ್ವಾಮಿ…