ಕೋಲಾರ : ಕೋಲಾರ ಕ್ಷೇತ್ರ ಅಹಿಂದ ಮತಗಳನ್ನೇ ಹೆಚ್ಚು ಹೊಂದಿದ್ದು, ಸಿದ್ದು ಕೋಲಾರವನ್ನೇ ಆಯ್ಕೆ ಮಾಡಿಕೊಳ್ತಿರೋದೇಕೆ..? ಈ ಸ್ಟೋರಿ ಓದಿ..
ಕೋಲಾರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 60 ಸಾವಿರಕ್ಕೂ ಹೆಚ್ಚು ಮತಗಳಿವೆ. ಮುಸ್ಲಿಮರು ಎರಡನೇ ಸ್ಥಾನದಲ್ಲಿದ್ದು ಸುಮಾರು 40 ಸಾವಿರ ಮತಗಳಿವೆ ಒಕ್ಕಲಿಗರು 30 ಸಾವಿರದಷ್ಟು ಮತ ಹೊಂದಿದ್ದಾರೆ. ಕುರುಬ ಸಮುದಾಯದ ಮತ 20 ಸಾವಿರಕ್ಕೂ ಹೆಚ್ಚಿದೆ . ಕೋಲಾರ ಕ್ಷೇತ್ರದಲ್ಲಿ ಒಟ್ಟು 2,24,455 ಮತದಾರರಿದ್ದಾರೆ 1,12,175 ಪುರುಷ, 1,12,280 ಮಹಿಳಾ ಮತದಾರರಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆ, ಕೊಪ್ಪಳ, ಸವದತ್ತಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮೇಲೆ ಸಿದ್ದು ಕಣ್ಣಿಟ್ಟಿದ್ದರು. ಆದರೆ ಕೋಲಾರಕ್ಕೆ ಸಿದ್ದು ಕರೆತರಲು ರಮೇಶ್ ಕುಮಾರ್ ಪ್ರಯತ್ನ ಪಟ್ಟಿದ್ದು, ಸಿದ್ದು ಸ್ಪರ್ಧಿಸಿದರೆ ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಲಾಭ ಎನ್ನುವ ಲೆಕ್ಕಾಚಾರ ಮಾಡಲಾಗಿದೆ. ಕೋಲಾರದಲ್ಲಿ ಅಹಿಂದ ಮತಗಳು ನಿರ್ಣಾಯಕವಾಗಿವೆ ಹೀಗಾಗಿ ಸಿದ್ದು ಸ್ಪರ್ಧೆ ಮಾಡಿದರೆ ಗೆಲುವು ಸುಲಭ ಎನ್ನುವ ಲೆಕ್ಕಾಚಾರ ಮಾಡಿದ್ದಾರೆ.
ಇದನ್ನೂ ಓದಿ : ಕೋಲಾರದಿಂದಲೇ ಸಿದ್ದರಾಮಯ್ಯ ಸ್ಫರ್ಧೆ.. ಮತ್ತೆ ನಾಮಿನೇಷನ್ ಮಾಡುವಾಗ ಬರ್ತೀನಿ ಎಂದ ಸಿದ್ದು..!