ಕಬ್ಜ.. ಮೋಸ್ಟ್ ಎಕ್ಸ್ಪೆಕ್ಟೆಡ್ ಹೈವೋಲ್ಟೇಜ್ ಪ್ಯಾನ್ ಇಂಡಿಯಾ ಸಿನಿಮಾ. ರಿಯಲ್ ಸ್ಟಾರ್ ಉಪೇಂದ್ರ- ಕಿಚ್ಚ ಸುದೀಪ್ ಜೊತೆಯಾಗಿರೋ ಮಲ್ಟಿಸ್ಟಾರರ್ ಸಿನಿಮಾ. ಎರಡು ಭಾಗಗಳಾಗಿ 7 ಭಾಷೆಗಳಲ್ಲಿ ಬಾಕ್ಸಾಫೀಸ್ ಶೇಕ್ ಮಾಡೋಕೆ ಬರ್ತಿರೋ ಸಿನಿಮಾ. ಶೂಟಿಂಗ್ ಹಂತದಲ್ಲೇ ಸಿಕ್ಕಾಪಟ್ಟೆ ವೈಬ್ರೇಷನ್ ಕ್ರಿಯೇಟ್ ಮಾಡಿರೋ ಸಿನಿಮಾ ಇದು.. ಎಲ್ಲಾ ಅಂದುಕೊಂಡಂತೆ ಆಗಿದ್ರೆ, ಇಷ್ಟೊತ್ತಿಗೆ ಶೂಟಿಂಗ್ ಕಂಪ್ಲೀಟ್ ಆಗಿ ಸಿನಿಮಾ ರಿಲೀಸ್ ಗೆ ರೆಡಿ ಆಗಬೇಕಿತ್ತು. ಕೊರೋನಾ ಹಾವಳಿಯಿಂದ ಸಿನಿಮಾ ತಡವಾಗ್ತಿದೆ. ಲೇಟ್ ಆದ್ರೂ ಲೇಟೆಸ್ಟ್ ಆಗಿ ಸಿನಿಮಾ ಕಟ್ಟಿಕೊಡೋ ಸಾಹಸ ಮಾಡ್ತಿದ್ದಾರೆ ನಿರ್ದೇಶಕ ಆರ್. ಚಂದ್ರು.
ಭಾರತೀಯ ಚಿತ್ರರಂಗ ತಿರುಗಿ ನೋಡುವಂತಹ ಸಿನಿಮಾ ಮಾಡಿ, ಬಾಕ್ಸಾಫೀಸ್ ಕಬ್ಜ ಮಾಡೋಕೆ ನಿರ್ದೇಶಕ ಆರ್. ಚಂದ್ರು ಮುಂದಾಗಿದ್ದಾರೆ. ಶೂಟಿಂಗ್ ಹಂತದಲ್ಲೇ ಈ ಪ್ಯಾನ್ ಇಂಡಿಯಾ ಸಿನಿಮಾ ಭಾರೀ ಸೌಂಡ್ ಮಾಡ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ಕಿಚ್ಚ ಸುದೀಪ್ ಕೂಡ ಕೈ ಜೋಡಿಸಿರೋದು ನಿರೀಕ್ಷೆ ದುಪ್ಪಟ್ಟಾಗುವಂತೆ ಮಾಡಿದೆ. ಅರ್ಧ ಭಾಗ ಶೂಟಿಂಗ್ ಮುಗಿಯುತ್ತಾ ಬಂದರೂ ಕಬ್ಜ ಸಿನಿಮಾ ಹೀರೋಯಿನ್ ಯಾರು ಅನ್ನೋದು ಮಾತ್ರ ಕನ್ಫರ್ಮ್ ಆಗಿಲ್ಲ. ಪರಭಾಷೆಯ ಟಾಪ್ ಹೀರೋಯಿನ್ಸ್ ಹೆಸ್ರು ಕಬ್ಜ ಚಿತ್ರದ ನಾಯಕಿ ಪಾತ್ರಕ್ಕೆ ಕೇಳಿಬರ್ತಾನೇ ಇದೆ.
ಆರ್. ಚಂದ್ರು ಕೂಡ ಬಹುಕೋಟಿ ವೆಚ್ಚದ ಸಿನಿಮಾ ರೇಂಜ್ ಗೆ ತಕ್ಕಂತೆ ಸ್ಟಾರ್ ನಟಿಯನ್ನ ಚಿತ್ರಕ್ಕಾಗಿ ಆಯ್ಕೆ ಮಾಡೋ ಕಸರತ್ತು ನಡೆಸ್ತಿದ್ದಾರೆ. ಆದ್ರೆ, ಯಾವುದೂ ಇನ್ನು ಪಕ್ಕಾ ಆಗಿಲ್ಲ. ಸುಖಾ ಸುಮ್ಮನೆ ಅವರು ಬರ್ತಾರೆ ಇವರು ಬರ್ತಾರೆ ಅಂತೆಲ್ಲಾ ಹೇಳೋದು ತಪ್ಪಾಗತ್ತೆ.. ಒಮ್ಮೆ ಕಥೆ ಹೇಳಿ, ಮಾತುಕತೆ ನಡೆಸಿ ಡೇಟ್ಸ್, ರೆಮ್ಯೂನರೇಷನ್ ಎಲ್ಲಾ ಫೈನಲ್ ಆಗಿ ಅಗ್ರಿಮೆಂಟ್ ಗೆ ಸೈನ್ ಮಾಡಿದ್ಮೇಲೆ ನಾಯಕಿ ಯಾರು ಅನ್ನೋದನ್ನ ಹೇಳಿದ್ರೆ, ಚೆನ್ನಾಗಿರುತ್ತೆ ಅನ್ನೋದು ಆರ್. ಚಂದ್ರು ಲೆಕ್ಕಾಚಾರ.. ಅದೇ ಕಾರಣಕ್ಕೆ ನಾಯಕಿ ಯಾರು ಅನ್ನೋ ವಿಚಾರದ ಬಗ್ಗೆ ನಿರ್ದೇಶಕರು ಮೌನ ವಹಿಸಿದ್ದಾರೆ.
ಕಬ್ಜ ಸಿನಿಮಾ ನಾಯಕಿ ಪಾತ್ರಕ್ಕೆ ತಮನ್ನಾರನ್ನು ಅಪ್ರೋಚ್ ಮಾಡಿದ್ದಾರೆ ಅನ್ನೋ ಸುದ್ದಿಯೂ ಇದೆ. ಈ ಬಗ್ಗೆ ಮಾತುಕತೆ ನಡೆಯಬೇಕಿದೆ. ಮತ್ತೊಂದು ಕಡೆ ಕನ್ನಡದ ನಟಿಯನ್ನೋ ಅಥವಾ ಹೊಸ ಹುಡುಗಿಯನ್ನ ನಾಯಕಿ ಆಗಿ ಆಯ್ಕೆ ಮಾಡುವ ಬಗ್ಗೆ ಕೂಡ ಚಿತ್ರತಂಡ ಚಿಂತನೆ ನಡೆಸ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಅಂದ ಮಾತ್ರಕ್ಕೆ ಪರಭಾಷೆಯ ಸ್ಟಾರ್ ಹೀರೋಯಿನ್ನೇ ಆಗ್ಬೇಕು ಅಂತೇನೂ ಇಲ್ವಲ್ಲ. ಸಿನಿಮಾದಲ್ಲಿ ಧಮ್ ಇದ್ರೆ, ನಾಯಕಿ ಯಾರೇ ಆದ್ರು, ನಡೆಯುತ್ತೆ.. ಇದೇ ವಿಚಾರವಾಗಿ ಚಿತ್ರತಂಡ ಚರ್ಚೆ ನಡೆಸ್ತಿದೆ.. ಫೆಬ್ರವರಿ 10ಕ್ಕೆ ಕಬ್ಜ ಚಿತ್ರದ ಹೊಸ ಶೆಡ್ಯೂಲ್ ಶೂಟಿಂಗ್ ಶುರುವಾಗುತ್ತೆ. ಆ ವೇಳೆಗೆ ನಾಯಕಿ ಆಯ್ಕೆ ಮಾಡಿ, ಸೆಟ್ ಗೆ ನಾಯಕಿಯನ್ನು ಕರೆಸುವ ಪ್ರಯತ್ನದಲ್ಲಿದ್ದಾರೆ ಆರ್. ಚಂದ್ರು.
ಪೋಸ್ಟರ್ಸ್ ಮತ್ತು ಮೇಕಿಂಗ್ ವೀಡಿಯೋದಿಂದ ಕಬ್ಜ ಸಿನಿಮಾ ಹೈಪ್ ಕ್ರಿಯೇಟ್ ಮಾಡಿದೆ.. ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸ್ತಿದ್ದು, ಭಾರೀ ಸೆಟ್ ಗಳನ್ನು ಹಾಕಿ ಈ ಗ್ಯಾಂಗ್ ಸ್ಟರ್ ಕಥೆ ಕಟ್ಟಿಕೊಡ್ತಿದ್ದಾರೆ ಆರ್. ಚಂದ್ರು.. ರೆಟ್ರೋ ಸ್ಟೈಲ್ ಅಂಡರ್ವರ್ಲ್ಡ್ ಕಬ್ಜ ಸಿನಿಮಾದಲ್ಲಿ ಉಪ್ಪಿ, ಸುದೀಪ್ ಗೆಟಪ್ ಸಿನಿರಸಿಕರ ಗಮನ ಸೆಳೆದಿದೆ.. ಸಿನಿಮಾ ನಾಯಕಿ ಯಾರಾಗ್ತಾರೆ ಅನ್ನೋ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ.