ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಗದ್ದುಗೆ ಯಾರಿಗೆ ಸಿಗುತ್ತೆ ಎನ್ನುವುದು ಸದ್ಯ ಯಕ್ಷ ಪ್ರಶ್ನೆಯಾಗಿದೆ. 4ವಾರ್ಡ್ ಗಳಲ್ಲಿ ಗೆದ್ದು ಜೆಡಿಎಸ್ ಕಿಂಗ್ ಮೇಕರ್ ಆಗಿದೆ. ನಮ್ಮವರಿಗೇ ಮೇಯರ್ ಸ್ಥಾನ ಕೊಡಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿದೆ.
ಇದನ್ನೂ ಓದಿ: ನಮೋ 71ನೇ ಜನ್ಮದಿನ… ಲಸಿಕಾ ಮೇಳದಲ್ಲಿ ಬೆಳಗಾವಿ ಜಿಲ್ಲೆಗೆ ಇಡೀ ದೇಶದಲ್ಲಿಯೇ ಎರಡನೇ ಸ್ಥಾನ…
ಮಹಾನಗರ ಪಾಲಿಕೆಯ ರಿಸಲ್ಟ್ ಬಂದು ವಾರಗಳು ಕಳೆದಿದೆ, ಆದ್ರೂ ಮೇಯರ್ ಯಾರು ಎನ್ನುವುದು ಗೊತ್ತಾಗದೆ ಕಲಬುರಗಿ ಮಹಾನಗರ ಪಾಲಿಕೆ ಗೊಂದಲದಲ್ಲೆ ಸಿಲುಕಿದೆ. ಜೆಡಿಎಸ್ ಗೆ ಯಾವ ಪಕ್ಷ ಮೇಯರ್ ಸ್ಥಾನ ಕೊಡುತ್ತಾರೋ ಅವರಿಗೆ ನಮ್ಮ ಬೆಂಬಲವಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಈ ಯಾವುದೇ ಪಕ್ಷಗಳು ಆಹ್ವಾನ ನೀಡಿದರೂ ಸ್ವಾಗತ ಎಂದು ಕಲಬುರಗಿಯಲ್ಲಿ ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಉಸ್ತಾದ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಜೆಡಿಎಸ್ ಪಕ್ಷ ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ… ಜೆಡಿಎಸ್ ಗೆ ಗುಡ್ ಬೈ ಹೇಳಿದ ಕೋಲಾರ ಶಾಸಕ ಶ್ರೀನಿವಾಸಗೌಡ…
ಸದ್ಯ ಜೆಡಿಎಸ್ ಮೇಯರ್ ಸ್ಥಾನ ನೀಡಲು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮನಸ್ಸು ಮಾಡಿಲ್ಲ. ಪಟ್ಟು ಬಿಡದೆ ಆಹ್ವಾನ ನೀಡಿದೆ. ಆದ್ರೆ ಈ ವಿಷಯವಾಗಿ ಜೆಡಿಎಸ್ ಅನ್ನು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರು ಬಿಟ್ಟರೆ ಕಾಂಗ್ರೆಸ್ ನ ಯಾವ ನಾಯಕರು ಸಂಪರ್ಕ ಮಾಡಿಲ್ಲ. ಆದ್ರೆ, ಬಿಜೆಪಿಯಿಂದ ಸಾಕಷ್ಟು ಜನರು ನಮ್ಮನ್ನು ಸಂಪರ್ಕ ಮಾಡಿದ್ದಾರೆ. ಜೆಡಿಎಸ್ ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಹ ಮೇಯರ್ ಪಟ್ಟ ಯಾವ ಪಕ್ಷ ನೀಡುತ್ತದೆಯೋ, ಆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳೋಣ ಎಂದಿದ್ದಾರೆ. ಇದೀಗ ನಾಲ್ಕು ಜನ ಜೆಡಿಎಸ್ ಸದಸ್ಯರು ಬೆಂಗಳೂರಿನಿಂದ ಕಲಬುರಗಿಗೆ ಆಗಮಿಸಿದ್ದಾರೆ ಎಂದು ನಾಸೀರ್ ಹುಸೇನ್ ತಿಳಿಸಿದ್ದಾರೆ.