ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ MBA ವಿದ್ಯಾರ್ಥಿನಿ ಮೇಲೆ ಮಂಗಳವಾರ ಸಂಜೆ ಹೆಲಿಪ್ಯಾಡ್ ಬಳಿಯ ವಾಟರ್ ಟ್ಯಾಂಕ್ನ ಗುಡ್ಡದ ಬಳಿ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಈ ಬಗ್ಗೆ ನಟಿ, ಬಿಜೆಪಿ ನಾಯಕಿ ಶ್ರುತಿ ಪ್ರತಿಕ್ರಿಯಿಸಿದ್ದು, ಅತ್ಯಾಚಾರಕ್ಕೆ ಕೊನೆ ಯಾವಾಗ ? ಎಂದು ಪ್ರಶ್ನಿಸಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿರುವ ನಟಿ ಶ್ರುತಿ, ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ ? ಕಾಮುಕರನ್ನ ಬಂಧಿಸುವ ಶಿಕ್ಷಿಸುವ ಕೆಲಸ ಆಗಬೇಕು, ಇಂಥಹ ಪುರುಷರು ಬೆಳೆಯುವ ಮನೆಯ ವಾತಾವರಣ ಸಂಸ್ಕಾರ ಪೋಷಕರ ಜವಾಬ್ದಾರಿಯೂ ಆಗಿರುತ್ತದೆ, ಸಾಮೂಹಿಕ ಅತ್ಯಾಚಾರದ ಘಟನೆಗಳು ಮಹಿಳೆಯ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವಂತಾಗುತ್ತದೆ, ಹಾಗಾಗದಿರಲಿ ಎಂದು ಹಿರಿಯ ನಟಿ ಶೃತಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ ತಿಳಿಸಿದ್ದಾರೆ.