ಮೈಸೂರು: ಮುಂದಿನ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ, 130ರಿಂದ 150 ಸ್ಥಾನವನ್ನ ಕಾಂಗ್ರೆಸ್ ಪಡೆಯಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಸಿದ್ದರಾಮಯ್ಯ ಮಾತನಾಡಿ, ಕಾಂಗ್ರೆಸ್ ಅಧಿಕಾರದ ಕೆಲಸಗಳನ್ನ ಜನ ಮೆಚ್ಚಿದ್ದಾರೆ. ಈ ಹಿಂದೆ ನೀಡಿದ್ದ ಭರವಸೆಗಳನ್ನ ಈಡೇರಿಸಿದ್ದೇವೆ, ಶೇಕಡಾ 99ರಷ್ಟು ಕೆಲಸಗಳನ್ನ ನಾವು ಮಾಡಿದ್ದೇವೆ, ಈಗಲೂ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಹಾಗೂ ಪ್ರತಿ ಕುಟುಂಬ ಮುಖ್ಯಸ್ಥೆಗೆ ತಿಂಗಳಿಗೆ 2000 ಸಾವಿರ ನೀಡುತ್ತೇವೆ, ಇನ್ನೂ ಹಲವು ಘೋಷಣೆಗಳನ್ನ ಮಾಡಲಿದ್ದೇವೆ. ಈ ಎಲ್ಲಾ ಯೋಜನೆಗಳು ಕಾಂಗ್ರೆಸ್ ಕೈಹಿಡಿಯಲಿದೆ. ಯಾರೇನೇ ಹೇಳಿದ್ರೂ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಸತ್ಯ ಎಂದಿದ್ದಾರೆ.
ಇದನ್ನೂ ಓದಿ: ಹೈಟೆಕ್ ಪಿಂಪ್ ಸ್ಯಾಂಟ್ರೋ ರವಿ ಕೇಸ್ ತನಿಖೆ ಚುರುಕು… ಪಿನ್ ಟು ಪಿನ್ ವಿಚಾರಣೆ ನಡೆಸ್ತಿರೋ ಸಿಐಡಿ ತಂಡ…