ಬೆಳಗಾವಿ : ಕಾಂಗ್ರೆಸ್ ಅವಧಿ ದೂರು ಲೋಕಾಯುಕ್ತಕ್ಕೆ ನೀಡ್ತೇವೆ, ತಾವು ಸಾಚಾ ಎನ್ನುತ್ತಿರುವವರ ಬಣ್ಣ ಬಯಲಾಗುತ್ತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಬೆಳಗಾವಿಯಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿ, ಅಸೆಂಬ್ಲಿಯಲ್ಲಿ ನೋಟಿಸ್ ಕೊಟ್ಟು ಪಲಾಯನ ಮಾಡ್ತಾರೆ, ಈಗ ಬೀದಿ-ಬೀದಿಯಲ್ಲಿ ಸುಳ್ಳು ಹೇಳಿಕೊಂಡು ಓಡಾಡ್ತಾರೆ. ಸದನಕ್ಕಿಂತಲೂ ದೊಡ್ಡ ವೇದಿಕೆ ಬೇಕಾ..? ದಾಖಲೆ ಕೊಟ್ಟು ಆರೋಪ ಮಾಡಲಿ, ಪುಗ್ಸಟ್ಟೆ ಭಾಷಣ ಬೇಡ ಎಂದು ಹೇಳಿದ್ದಾರೆ. ಬಹಿರಂಗ ಚರ್ಚೆಗೆ ಬನ್ನಿ ಎಂದ ಸಿದ್ದರಾಮಯ್ಯಗೂ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ : ತಮಿಳುನಾಡು ಅರಕ್ಕೋಣಂ ದೇವಸ್ಥಾನದ ಉತ್ಸವದ ವೇಳೆ ಕ್ರೇನ್ ಕುಸಿದು ಬಿದ್ದು ನಾಲ್ವರು ಸಾವು…