ತುಮಕೂರು : ಬಿಜೆಪಿಯವರು ಇನ್ನಷ್ಟು ಅಗ್ರೆಸೀವ್ ಆಗ್ಬೇಕು, ಟೀಕೆ ಮಾಡ್ತಿರೋ ಕಾಂಗ್ರೆಸ್ಗೆ ನಮ್ಮವರು ಠಕ್ಕರ್ ಕೊಡ್ತಿಲ್ಲ. ಕಾಂಗ್ರೆಸ್ಗೆ ತಿರುಗೇಟು ಕೊಡದಿದ್ರೆ ನಮ್ಮ ದೌರ್ಬಲ್ಯ ಅಂದ್ಕೊತಾರೆ, ಹೀಗೇ ಆದ್ರೆ ಕಾಂಗ್ರೆಸ್ ಹೇಳೋ ಸುಳ್ಳು ಸತ್ಯ ಅಂತಾ ಜನ ತಿಳೀತಾರೆ ಎಂದು ಸಚಿವ ಮಾಧುಸ್ವಾಮಿ ಪಾಠ ಮಾಡಿದ್ದಾರೆ.
ಚಿಕ್ಕನಾಯಕನಹಳ್ಳಿಯಲ್ಲಿ ಸಚಿವ ಮಾಧುಸ್ವಾಮಿ ಮಾತನಾಡಿ ಕಾಂಗ್ರೆಸ್ ಆರೋಪಕ್ಕೆ ನಾವು ಮೂಕ ಪ್ರೇಕ್ಷಕರಾದ್ರೆ ಕಷ್ಟವಾಗಿದೆ. ನೀವೇನು ಎಂದು ಯಾರಾದ್ರೂ ಕಾಂಗ್ರೆಸ್ಗೆ ವಾಪಸ್ ಕೇಳಿದ್ದೀರಾ..? ಕೋರ್ಟ್ನಲ್ಲಿ ಎದುರು ಪಾರ್ಟಿ ವಿಚಾರಣೆಗೆ ಬರದಿದ್ರೆ ಕೇಸ್ ಅವರಂತೆ ಆಗುತ್ತೆ. ನಮ್ಮ ಪಕ್ಷದಲ್ಲಿ ಎಕ್ಸ್ ಪಾರ್ಟಿ ಡಿಸಿಷನ್ ಆಗಬಾರದು, ಬೆಳಗ್ಗೆ ಕನ್ನ ಹಾಕಿದವರು…ರಾತ್ರಿ ಕಳ್ಳನ ಬಗ್ಗೆ ಮಾತಾಡುತಿದ್ದಾರೆ. ನೀವು ಅಂತವರ ವಿರುದ್ಧ ಮಾತನಾಡೋ ಧೈರ್ಯ ಮಾಡಿ, ನನ್ನ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರನ್ನೇ ಆಹ್ವಾನ ಮಾಡಿದ್ದೇನೆ. ಅವರು ಬಂದ್ರೆ ಚಿಕ್ಕನಾಯಕನ ಹಳ್ಳಿಯಲ್ಲಿ ಸಮಬಲದ ಹೋರಾಟ ಆಗುತ್ತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮೈಸೂರಿಗೆ ಕ್ಷಣಕ್ಷಣಕ್ಕೂ ನರಭಕ್ಷಕ ಹುಲಿ,ಚಿರತೆ ಆತಂಕ… ಹುಲಿ, ಚಿರತೆ ಬೇಟೆಗೆ ಮುಂದುವರೆದ ಕೂಂಬಿಂಗ್…