ಬೆಂಗಳೂರು: ಸ್ವಾತಂತ್ರ್ಯ ಸಂಗ್ರಾಮ ಆರಂಭಿಸಿದ್ದೇ ಒಕ್ಕಲಿಗರು, ನಾವು ಸಮಾನತೆ, ವಿಶ್ವಮಾನವತೆ ಬಗ್ಗೆ ಮಾತನಾಡುತ್ತೇವೆ ಎಂದು ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿಕೆ ಕೊಟ್ಟಿದ್ದಾರೆ.
ಈ ಬಗ್ಗೆ ಭೈರವೈಕ್ಯ ಬಾಲಗಂಗಾಧರನಾಥ ಶ್ರೀ ಜಯಂತೋತ್ಸವದಲ್ಲಿ ಮಾತನಾಡಿದ ಅವರು ನಾವು ಸಮಾನತೆ, ವಿಶ್ವಮಾನವತೆ ಬಗ್ಗೆ ಮಾತನಾಡುತ್ತೇವೆ, ಈ ಸಂದೇಶ ಕೊಟ್ಟವರು ನಮ್ಮ ಸಮುದಾಯದ ರಾಷ್ಟ್ರಕವಿ ಕುವೆಂಪು.
ಸ್ಮಾರ್ಟ್ ಸಿಟಿಯ ಪರಿಕಲ್ಪನೆ ಕೊಟ್ಟಿದ್ದೇ ನಾಡಪ್ರಭು ಕೆಂಪೇಗೌಡರು. ನಮ್ಮ ಸಮಯದಾಯದ ಬಗ್ಗೆ ಹೇಳಿಕೊಳ್ಳಲು ನಮಗೆ ಕೀಳರಿಮೆ ಇಲ್ಲ, ಅಧಿಕಾರ ದೊರೆತಾಗ ಸಮುದಾಯದ ಜನತೆಗಾಗಿ ಕೆಲಸ ಮಾಡಿದೆ ಎಂದು ಸಮುದಾಯ ಬಾಂಧವರಿಗೆ ಡಿವಿಎಸ್ ಕಿವಿ ಮಾತು ಹೇಳಿದ್ದಾರೆ.
ಇದನ್ನೂ ಓದಿ:ಹಿಂದೂ ಧರ್ಮದ ವಿಚಾರದಲ್ಲಿ ಟೀಕೆ ಬೇಡ.. ನಮಗೆ ರಾಮ ಇಷ್ಟ..ನಮ್ಮ ನಂಬಿಕೆ ಗೌರವಿಸಿ : ಸಿಎಂ ಟಾಂಗ್…!