ಇಸ್ಲಾಮಾಬಾದ್ : ಭಾರತದ ಜತೆ ಮೂರು ಯುದ್ಧ ಮಾಡಿ ಪಾಠ ಕಲಿತಿದ್ದೇವೆ.ಮತ್ತೊಮ್ಮೆ ಯುದ್ಧದ ಮಾತೇ ಇಲ್ಲ ಎಂದು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಹೇಳಿದ್ದಾರೆ. ನೆರೆ ರಾಷ್ಟ್ರದ ಜತೆ ನಮ್ಮ ದ್ವೇಷ ಇಲ್ಲ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆಗೆ ನಾವು ಸಿದ್ದರಿದ್ದೇವೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದ ಸಂದರ್ಶನದಲ್ಲಿ ಮಾತನಾಡಿದ ಶಹಬಾಜ್ ಷರೀಫ್ ಭಾರತ ನಮ್ಮ ನೆರೆಯ ದೇಶವಾಗಿದೆ. ಅದು ನಮ್ಮ ರಕ್ತದ ಒಂದು ಭಾಗವಾಗಿದೆ. ನಾವು ನೆರೆಯವರೆಂದು ಆಯ್ಕೆ ಮಾಡಿಕೊಂಡವರಲ್ಲ. ನಾವು ಹುಟ್ಟಿನಿಂದಲೂ ಅವರೊಂದಿಗಿದ್ದೇವೆ. ನಾವು ಶಾಂತಿಯಿಂದ ಮತ್ತು ಪ್ರಗತಿಗೆ ಪೂರಕವಾಗಿ ಬದುಕಬೇಕಿದೆ. ಇಬ್ಬರೂ ಬಡಿದಾಡಿಕೊಳ್ಳುವುದರಿಂದ ಸಮಯ ಮತ್ತು ಸಂಪನ್ಮೂಲದ ವ್ಯರ್ಥವಾಗಿದೆ.
ಪಾಕಿಸ್ತಾನ ಪಾಠ ಕಲಿತುಕೊಂಡಿದೆ. ನಾವು ಭಾರತದ ಜತೆ ಮೂರು ಯುದ್ಧಗಳನ್ನು ಮಾಡಿದ್ದೇವೆ. ಯುದ್ಧಗಳಲ್ಲಿ ಏನಾಗಿದೆ ಎನ್ನುವುದು ನಮಗೆ ಗೊತ್ತಿದೆ, ಈ ಯುದ್ಧಗಳು ನಿರುದ್ಯೋಗ, ಬಡತನವನ್ನು ಹೆಚ್ಚಿಸಿದ್ದು ಬಿಟ್ಟರೆ ಬೇರೇನೂ ಇಲ್ಲ. ಎಲ್ಲಾ ಸಮಸ್ಯೆಗಳನ್ನೂ ಪರಿಹಾರ ಮಾಡಿಕೊಳ್ಳಬಹುದು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಒಂದೇ ಮನವಿ ಮಾಡಿದ್ದಾರೆ. ಇಬ್ಬರು ಕುಳಿತು ಕಾಶ್ಮೀರ ಸೇರಿ ಜ್ವಲಂತ ಸಮಸ್ಯೆ ಬಗ್ಗೆ ಮಾತನಾಡೋಣ. ಎರಡೂ ದೇಶಗಳು ಪರಮಾಣು ರಾಷ್ಟ್ರಗಳಾಗಿವೆ, ನಾವು ಸಮರಕ್ಕೆ ನಿಂತರೆ ಯಾರೂ ಬದುಕುಳಿಯುವುದಿಲ್ಲ. ಯುದ್ಧಗಳಿಂದ ಪಾಕಿಸ್ತಾನ ಪಾಠ ಕಲಿತುಕೊಂಡಿದೆ.
ಇದನ್ನೂ ಓದಿ : ಸಂಪುಟ ವಿಸ್ತರಣೆ ವೇಳೆ ವಿಜಯೇಂದ್ರಗೆ ದೊಡ್ಡ ಸ್ಥಾನ..! ಗೃಹ ಸಚಿವ ಪಟ್ಟಕ್ಕೇರಲಿದ್ದಾರೆ ಬಿ.ವೈ .ವಿಜಯೇಂದ್ರ..!