ಮೈಸೂರು: ನಾವುಗಳು ಜನರ ಭಾವನೆಗಳಿಗೆ ಸ್ಪಂದಿಸಬೇಕಾಗುತ್ತೆ. ಎಲ್ಲಾ ಹಿಂದೂ ದೇವಾಲಯಗಳು ತೆರವು ಮಾಡುವುದಿಲ್ಲ. ರಸ್ತೆ ಬದಿಯಿಂದ ಸ್ಥಳಾಂತರಿಸಬೇಕಾದ ದೇವಾಲಯಗಳನ್ನು ಮಾತ್ರ ತೆರವು ಮಾಡುತ್ತೇವೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಗಣೇಶನ ಹಬ್ಬಕ್ಕೆ ದೀಪಿಕಾ ಸ್ಪೆಷಲ್ ಫೋಟೋಶೂಟ್..! ಹೇಗಿವೆ ಗೊತ್ತಾ ಹೊಸ ಫೋಟೋಗಳು..!ನಂಜನಗೂಡಲ್ಲಿ ರಾತ್ರೋರಾತ್ರಿ ದೇಗುಲ ನೆಲಸಮ ಮಾಡಲಾಗಿತ್ತು. ಇದೇ ಹಿನ್ನಲೆ ಮೈಸೂರು ಜಿಲ್ಲಾಡಳಿತದ ವಿರುದ್ಧ ಜನ ಆಕ್ರೋಶ ಹೊರಹಾಕಿದ್ರು. ಈ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ರು ಹಿಂದೂ ದೇವಸ್ಥಾನ ತೆರವು ಕ್ರಮ ಸರಿಯಲ್ಲ ಎಂದಿದ್ರು. ಸಂಸದ ಪ್ರತಾಪ್ ಸಿಂಹ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಎಸ್.ಎ ರಾಮದಾಸ್, ಅವರ ಅಭಿಪ್ರಾಯ ಬೇರೆ, ನನ್ನ ಅಭಿಪ್ರಾಯ ಬೇರೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಕ್ರಮ ಜರುಗುತ್ತಿದೆ. ಹಿಂದೂ ದೇವಾಲಯಗಳನ್ನ ಏಕಾಏಕಿ ತೆರವು ಮಾಡುತ್ತಿಲ್ಲ. ಮೊದಲು ಅದನ್ನ ಉಳಿಸಿಕೊಳ್ಳುವ ಯೋಚನೆ ಮಾಡಲಾಗುತ್ತಿದೆ. ಎರಡನೇ ಹಂತದಲ್ಲಿ ಸ್ಥಳಾಂತರಕ್ಕೆ ಚಿಂತನೆ ಇದೆ. ಇದೆರಡು ಸಾಧ್ಯವಾಗದಿದ್ದಾಗ ಅದನ್ನ ತೆರವು ಮಾಡಲಾಗುತ್ತಿದೆ ಎಂದು ಹೇಳಿದ್ಧಾರೆ.
ಇದನ್ನೂ ಓದಿ: ಸೆಕ್ಸ್ ದಂಧೆ ನಡೆಸುತ್ತಿದ್ದ ಹೆಂಗಸೂ ಸೇರಿ, ಐವರ ಬಂಧನ.. ಇವರೇನ್ಮಾಡ್ತಿದ್ರು ಗೊತ್ತಾ?
ನಾವುಗಳು ಜನರ ಭಾವನೆಗಳಿಗೆ ಸ್ಪಂದಿಸಬೇಕಾಗುತ್ತೆ. ಮಸೀದಿ, ಚರ್ಚ್, ಮಂದಿರ ಇರಲಿ ಅದೆಲ್ಲವೂ ಅಕಾಮಿಡೇಟ್ ಮಾಡ್ತೀವಿ. ಮೈಸೂರು ನಗರದ ಎಲ್ಲಾ ದೇವಾಲಯಗಳ ತೆರವು ಮಾಡಲ್ಲ. ನಾವು ಜಿಲ್ಲಾಡಳಿತಕ್ಕೆ ಸಹಕಾರ ಕೊಡುತ್ತಿದ್ದೇವೆ. ಈ ಸಂಬಂಧ ನಾನು ಇಡೀ ರಾಜ್ಯಕ್ಕೆ ಅನ್ವಯ ಆಗುವ ಫ್ರೇಮ್ ಇಟ್ಟುಕೊಂಡಿದ್ದೇನೆ. ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರನ್ನ ಭೇಟಿಯಾಗಿ ಚರ್ಚೆ ಮಾಡ್ತೇನೆ ಎಂದು ಮೈಸೂರಿನಲ್ಲಿ ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ಧಾರೆ.