ಭೂಪನೊಬ್ಬ ತಲೆ ಮೇಲೆ ಬೈಕ್ ಹೊತ್ತು ಬಸ್ ಟಾಪ್ ಏರಿದ್ದಾನೆ. ಇದು ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಬಸ್ ಟಾಪ್‌ನಲ್ಲಿ ಲಗೇಜ್, ಪಾರ್ಸೆಲ್‌ಗಳನ್ನು ಕೊಂಡೊಯ್ಯುವುದು ಹೊಸದೇನು ಅಲ್ಲ. ಬಸ್ ನಿಲ್ದಾಣದಲ್ಲಿ ಇದಕ್ಕೆಂದೇ ಶ್ರಮಜೀವಿಗಳು ಇರುತ್ತಾರೆ. ಶ್ರಮಜೀವಿಯ ಶಕ್ತಿ, ಸಾಮರ್ಥ್ಯ ಒಂದೊಂದು ಸಲ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡುತ್ತದೆ. ಇದು ಕೂಡಾ ಅಂತಹದ್ದೇ ಒಂದು ವಿಡಿಯೋ ಆಗಿದೆ.
They are really super human 👏🔥❤️ pic.twitter.com/kNruhcRzE1
— ज़िन्दगी गुलज़ार है ! (@Gulzar_sahab) November 25, 2022
ಈ ವೀಡಿಯೊವನ್ನು ಟ್ವಿಟರ್ ನಲ್ಲಿ ಸೋಶಿಯಲ್ ಮೀಡಿಯಾದ ಅನೇಕ ಬಳಕೆದಾರರು ಶೇರ್ ಮಾಡಿಕೊಂಡಿದ್ದು, ಮಾಹಿತಿಯ ಪ್ರಕಾರ, ಬಸ್ ನಿಲ್ದಾಣದಲ್ಲಿರುವ ಬಸ್ ನ ಟಾಪ್ ಅಂದರೆ ಲಗೇಜ್ ಇಡುವ ಸ್ಥಳಕ್ಕೆ ಬೈಕ್ ನ್ನು ಹಾಕಬೇಕಿತ್ತು. ಹೀಗಾಗಿ ಕಾರ್ಮಿಕನೊಬ್ಬ ತನ್ನ ತಲೆಯ ಮೇಲೆ ಬೈಕ್ ಎತ್ತಿಕೊಂಡು ಬಂದು, ಅದನ್ನು ಬಸ್ ನಲ್ಲಿರುವ ಏಣಿಯ ಮೂಲಕ ಹತ್ತಿ ಮೇಲಕ್ಕೆ ಹಾಕಿದ್ದಾನೆ.
ಇದನ್ನೂ ಓದಿ : ಸಂಸದೆ ಸುಮಲತಾರ ಆಪ್ತ ಇಂಡುವಾಳು ಸಚ್ಚಿದಾನಂದ ಬಿಜೆಪಿಗೆ ಸೇರ್ಪಡೆ…