ಕೊಲಂಬೊ: ಶ್ರೀಲಂಕಾದಲ್ಲಿ ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ಹಿಂಸಾರ ಭುಗಿಲೆದ್ದಿದ್ದು, ಜನರ ಆಕ್ರೋಶ ಪ್ರತಿಭಟನೆಯ ರೂಪ ಪಡೆದಿದೆ. 5,000 ಕ್ಕೂ ಹೆಚ್ಚು ಜನರು ಲಂಕಾ ರಾಜಧಾನಿಯಲ್ಲಿ ಅಧ್ಯಕ್ಷರ ಭವನದ ಬಳಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಅಧ್ಯಕ್ಷರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಶ್ರೀಲಂಕಾದಲ್ಲಿ ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ತೈಲ ಕ್ಷೋಭೆ ಈಗ ತಾರಕಕ್ಕೇರಿದೆ. ಇಡೀ ರಾಷ್ಟ್ರದಲ್ಲಿ ಡೀಸೆಲ್ ಖಾಲಿಯಾಗಿ, ಡೀಸೆಲ್ ಬಂಕ್‌ಗಳು ಭಣಗುವಂತಾಗಿದೆ. ಬಸ್ಸುಗಳು, ಕಾರುಗಳು, ಸರಕು ಸಾಗಣೆ ವಾಹನಗಳು, ಆ್ಯಂಬುಲೆನ್ಸ್ ಸೇರಿ ಅತ್ಯಗತ್ಯ ವಾಹನಗಳಿಗೂ ಡೀಸೆಲ್ ಇಲ್ಲದಂತಾಗಿದೆ. ರಿಪೇರಿಗೆ ನಿಲ್ಲಿಸಲಾಗಿರುವ ವಾಹನಗಳ ಟ್ಯಾಂಕ್‌ಗಳಿಂದ ಡೀಸೆಲ್‌ಗಳನ್ನು ತೆಗೆದು ಅವುಗಳ ಸಹಾಯದಿಂದ ಅಗತ್ಯ ಸಾರಿಗೆ ನಿರ್ವಹಿಸಲಾಗುತ್ತಿದೆ” ಎಂದು ಲಂಕಾದ ದಿಲಂ ಅಮುನುಗಮಾ ತಿಳಿಸಿದ್ದಾರೆ.
ಇನ್ನೂ ತೈಲ ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. ಗುರುವಾರದಿಂದ ಲಂಕಾದೆಲ್ಲೆಡೆ ದಿನಕ್ಕೆ 13 ಗಂಟೆಗಳ ವಿದ್ಯುತ್ ನಿಲುಗಡೆ ನಿಯಮ ಜಾರಿಯಾಗಿದೆ. 2.2 ಲಕ್ಷ ಜನರಿಗೆ ತೊಂದರೆಯಾಗಿದೆ. ಲಂಕಾದ ಎಲ್ಲಾ ಊರುಗಳ ಬೀದಿದೀಪಗಳು ಸ್ತಬ್ಧವಾಗಿವೆ.