ಬೆಂಗಳೂರು: ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡರ ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬರು ಸಂಚಾರಿ ನಿಯಮವನ್ನ ಉಲ್ಲಂಘನೆ ಮಾಡುತ್ತಿರುವ ವಿಷಯ ಬೆಳಕಿಗೆ ಬಂದಿತ್ತು. ಬಿಟಿವಿ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಸಂಚಾರ ಪೊಲೀಸರು ಕಾರ್ಯಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡರು ನೋಡಲೇ ಬೇಕಾದ ಸ್ಟೋರಿ ಇದು..
ಬಿಟಿವಿ ವರದಿ ಪ್ರಸಾರ ಮಾಡಿದ ಬೆನ್ನಲ್ಲೆ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡರ ಹೆಸರು ಹೇಳಿಕೊಂಡು ಓಡಾಡುತ್ತಿದ್ದವನಿಗೆ ಸಂಕಷ್ಟ ಎದುರಾಗಿದೆ. ಗಿರೀಶ್ ಎಂಬ ವ್ಯಕ್ತಿ ಬೈಕ್ ಮೇಲೆ ಆಯುಕ್ತರ ಹೆಸರಿನ ಜೊತೆಗೆ ನಿಮ್ಮ ಡೆಸಿಗ್ವೇಷನ್ ಸಹ ಹಾಕ್ಕೊಂಡು ನಗರದಲ್ಲಿ ಸಂಚಾರ ಮಾಡುತ್ತಿದ್ದು ಈತ ತನ್ನ ಗಾಡಿ ಮೇಲೆ ಪ್ರೆಸ್ ಎಂತಲೂ ಹಾಕಿಕೊಂಡು ಮನಬಂದಂತೆ ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿದ್ದ. ಎಷ್ಟೋ ದಿನಗಳಿಂದ ಇದೇ ರೀತಿ ಆಯುಕ್ತರ ಹೆಸರು ಹೇಳಿಕೊಂಡು ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿದ್ದ ವಾಹನ ಸವಾರ ಗಿರೀಶ್ ನ ದ್ವಿಚಕ್ರವಾಹನ ಪೋಲಿಸರು ಜಪ್ತಿ ಮಾಡಿದ್ದಾರೆ. ವಾಹನ ಸವಾರ ಗಿರೀಶ್ ತ್ಯಾಗರಾಜನಗರ ನಿವಾಸಿ ಎಂದು ತಿಳಿದು ಬಂದಿದೆ.
ಬಿಟಿವಿಯ ವರದಿ ಮಾಡಿದ ನಂತರ ನಗರದ ಸಂಚಾರ ಠಾಣೆ ಪೊಲೀಸರಿಗೆ ವಾಹನ ಸವಾರನ ಪತ್ತೆಗೆ ಸೂಚಿಸಿದ ಜಂಟಿ ಪೊಲೀಸ್ ಆಯುಕ್ತ ನೀಡಿದ್ದರು. ಅಂತೆಯೇ ಜಯನಗರ ಸಂಚಾರ ಪೊಲೀಸರು ಗಿರೀಶ್ ನ ವಾಹನ ಜಪ್ತಿ ಮಾಡಿದಲ್ಲದೇ, 42 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ 20,200 ರೂ ದಂಡ ವಸೂಲಿ ಮಾಡಿದ್ದಾರೆ