ಮಂಡ್ಯ: ನಟ ಪುನೀತ್ ರಾಜ್ ಕುಮಾರ್ ಅವರ 11 ದಿನದ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಇಂದು ನಟ ವಿನೋದ್ ರಾಜ್ ಅವರು ಕಾವೇರಿ ನದಿಯಲ್ಲಿ ತರ್ಪಣ ಬಿಟ್ಟು ಅಪ್ಪು ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಶ್ರೀರಂಗಪಟ್ಟಣದ ಗಂಜಾಮ್ ಬಳಿ ಇರುವ ಸಂಗಮ್ ದಲ್ಲಿ ನಟ ವಿನೋದ್ ರಾಜ್ ಅವರು ಪುನೀತ್ ರಾಜ್ ಕುಮಾರ್ ರ ವೈದಿಕ ಕ್ರಿಯಾ ಅಪರ ಕರ್ಮದ ಕಾರ್ಯ ವನ್ನು ನೆರವೇರಿಸಿದರು.ತಾಯಿ ಲೀಲಾವತಿ ಹಾಗು ಸಮೀಪದ ಬಂಧುಗಳ ಜೊತೆ ಸಂಗಮದ ಕಾವೇರಿ ನದಿ ತೀರಕ್ಕೆ ಆಗಮಿಸಿ ನದಿ ತೀರದಲ್ಲಿ ಪುನೀತ್ ರಾಜ್ ಕುಮಾರ್ ಗೆ ವೈದಿಕ ಪೂಜಾ ಕೈಂಕರ್ಯ ನೆರವೇರಿಸಿದರು. ಸ್ಥಳದಲ್ಲಿ ಆಶ್ಲೇಷ ಬಲಿ ಹಾಗೂ ನಾರಾಯಣ ಬಲಿ ಪೂಜೆ ನೆರವೇರಿಸಿ ಕಾವೇರಿ ನದಿಯಲ್ಲಿ ತರ್ಪಣ ಬಿಟ್ಟು ಪುನೀತ್ ಆತ್ಮಕ್ಕೆ ಶಾಂತಿ ಕೋರಿದರು.