ಮಂಡ್ಯ : ಸಂಸದೆ ಸುಮಲತಾ ವಿಚಾರಕ್ಕೆ ಗ್ರಾಮಸ್ಥರ ಹೊಯ್ಕೈ ಮಿಲಾಯಿಸಿದ್ದಾರೆ. ಸುಮಲತಾ ಬೆಂಬಲಿಗರು ಮತ್ತು ಮತ್ತೊಂದು ಬಣದ ನಡುವೆ ಫೈಟ್ ನಡೆದಿದೆ.
ಗ್ರಾಮಸ್ಥರು ದೇವಸ್ಥಾನ ಕಾರ್ಯಕ್ರಮದಲ್ಲಿ ಕೈಕೈ ಮಿಲಾಯಿಸಿದ್ದಾರೆ. ಸುಮಲತಾರನ್ನು ವೇದಿಕೆ ಹತ್ತಿಸಿದ್ದಕ್ಕೆ ಎರಡು ಗುಂಪುಗಳ ಕಿತ್ತಾಟ ನಡೆದಿದೆ. ಮಂಡ್ಯದ ಬಿ.ಗೌಡಗೆರೆ ಗ್ರಾಮದ ಮಹದೇಶ್ವರ ದೇವಾಲಯದಲ್ಲಿ ಗಲಾಟ ನಡೆದಿದ್ದು, ಗ್ರಾಮಸ್ಥರು ದೇವಾಲಯದ ಉದ್ಘಾಟನೆಗೆ ರಾಜಕಾರಣಿಗಳನ್ನು ದೂರ ಇಟ್ಟಿದ್ದಾರೆ. ರಾಜಕೀಯ ಮುಖಂಡರನ್ನು ವೇದಿಕೆ ಹತ್ತಿಸದ ಹಾಗೇ ಮೊದಲು ತೀರ್ಮಾನವಾಗಿತ್ತು, ಆದರೆ, ಕೆಲವರು ಸುಮಲತಾರನ್ನ ಕರೆತಂದಿದ್ದಕ್ಕೆ ಉಳಿದವರಿಂದ ಅಸಮಾಧಾನ ವ್ಯಕ್ತವಾಗಿದೆ. ಯಾಕೆ ಸುಮಲತಾರನ್ನ ವೇದಿಕೆ ಹತ್ತಿಸುತ್ತೀರಾ ಎಂದು ಜಗಳ ಮಾಡಿದ್ದಾರೆ. ಎರಡು ಗುಂಪುಗಳು ಕೈಕೈ ಮಿಲಾಯಿಸಿ ವಾಗ್ವಾದ ನಡೆಸಿದ್ದಾರೆ. ಮತ್ತೊಂದು ಗುಂಪು ವಿರೋಧದ ನಡುವೆಯು ವೇದಿಕೆ ಏರಿಸಿದ್ದು, ಸಂಸದೆ ಸುಮಲತಾ ವೇದಿಕೆ ಹತ್ತಿ ದೇವಸ್ಥಾನದ ಕುರಿತು ಮಾತನಾಡಿದ್ದಾರೆ.
ಇದನ್ನೂ ಓದಿ : ಕೋಲಾರದಲ್ಲಿ ಸಿದ್ದರಾಮಯ್ಯಗೆ ಮನೆ ಫಿಕ್ಸ್… ಸುಮಾರು ಒಂದು ಎಕರೆ ತೋಟದಲ್ಲಿದೆ ವಿಶಾಲ ಮನೆ…