ತುಮಕೂರು : ಗ್ರಾಮ ವಾಸ್ತವ್ಯ ನನ್ನ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಇದು ನನಗೆ ಪಾಠಶಾಲೆ , ಅಧಿಕಾರಿಗಳಿಗೂ ಪಾಠಶಾಲೆಯಾಗಿದೆ. ಪಾಠಶಾಲೆಗೆ ಬಂದ್ರೆ ಬಹಳಷ್ಟು ಪಾಠ ಕಲಿಯಬಹುದು. ಸುಮಾರು 1 ಲಕ್ಷ ಅರ್ಜಿ ಸ್ವೀಕಾರ ಮಾಡಿದ್ದೇನೆ. 50 ಸಾವಿರ ಫಲಾನುಭವಿಗಳಿಗೆ ಸೌಲಭ್ಯ ಕೊಡುತ್ತಾ ಇದ್ಧೇವೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ತುಮಕೂರಿನಲ್ಲಿ ಆರ್ ಅಶೋಕ್ ಮಾತನಾಡಿ ನನ್ನ ಗ್ರಾಮ ವಾಸ್ತವ್ಯದಿಂದ ಅನುಕೂಲ ಆಗುತ್ತಿದ್ದು, ಒಟ್ಟು 200 ಕಡೆ ಗ್ರಾಮ ವಾಸ್ತವ್ಯ ಆಗಿದೆ. ಸುಮಾರು 1 ಲಕ್ಷ ಅರ್ಜಿ ಸ್ವೀಕಾರ ಮಾಡಿದ್ದೇನೆ. 50 ಸಾವಿರ ಫಲಾನುಭವಿಗಳಿಗೆ ಸೌಲಭ್ಯ ಕೊಡುತ್ತಾ ಇದ್ದೀನಿ. ಜಿಲ್ಲಾಧಿಕಾರಿ ತಹಸೀಲ್ದಾರ್ ನಿಮ್ಮ ಮನೆ ಬಾಗಿಲಿಗೆ ಬರುತ್ತಾ ಇದ್ದಾರೆ. ಹಿಂದೆ ಗಲಾಟೆಯಾದಾಗ ಡಿಸಿ ನಿಮ್ಮೂರಿಗೆ ಡಿಸಿ ಬರ್ತಾ ಇದ್ರು. ಜನಗಳಿಗೆ ಸವಲತ್ತು ಕೊಡೋದಕ್ಕೆ ಮನೆ ಬಾಗಿಲಿಗೆ ಹೋಗಬೇಕು. ಇವತ್ತು ಆಫೀಸ್ ಹೇ ಮನೆ ಬಾಗಿಲಿಗೆ ಬರುತ್ತಾ ಇದೆ ಎಂದು ಹೇಳಿದ್ದಾರೆ.
ಐದು ವರ್ಷಕ್ಕೆ ನಮ್ಮೂರಿಗೆ ಬಂದ್ರೆ ನಮ್ಮ ಕಷ್ಟ ಗೊತ್ತಾಗೊಲ್ಲ. ಬಡವರು, 60 ವರ್ಷ ಎಲ್ಲಾ ಸರ್ಟಿಫಿಕೇಟ್ ತರೋವಾಗ ಆರು ತಿಂಗಳು ಆಗುತ್ತೆ. ಅಧಿಕಾರಿಗಳು ಬರಬೇಕು ಅಂತಾ ನಾನು ಹೇಳ್ತೀನಿ. ಹಿಂದೆ ಬ್ರಿಟಿಷ್ ಕಾಲದಲ್ಲಿ ಅಮಲ್ದಾರ್ ಬರ್ತಾ ಇದ್ರು ಎಲ್ಲಾ ಕೆಲಸ ಮುಗಿಸಿ ಹೋಗ್ತೀದ್ರು. ಓಟ್ ಹಾಕೋದಕ್ಕೆ ಮುಂಚೆ ನಿಮ್ಮನೇ ಬಾಗಿಲಿಗೆ. ಓಟ್ ಹಾಕಿದ ಮೇಲೆ ನಮ್ಮನೇ ಬಾಗಿಲಿಗೆ ಇದು ಹೋಗಬೇಕು. 5331 ಫಲಾನುಭವಿಗಳಿಗೆ ಸರ್ಕಾರದ ಸವಲತ್ತು ಕೊಡುತ್ತಾ ಇದ್ದೇವೆ ಎಂದಿದ್ದಾರೆ.
ಇದನ್ನೂ ಓದಿ : ಪಿಯುಸಿ ಫಲಿತಾಂಶ ಪ್ರಕಟ : ಹಪ್ಪಳ ಮಾರುತ್ತಿದ್ದ ಕುಟುಂಬದ ಹುಡುಗಿ ಸೆಕೆಂಡ್ ರ‍್ಯಾಂಕ್…!