ಬೆಂಗಳೂರು: ಕಿಚ್ಚ ಸುದೀಪ್ (Kiccha Sudeepa) ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ (Vikrant Rona) ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕ ನಿಗದಿಯಾಗಿದೆ.
ಕಿಚ್ಚ ಸುದೀಪ್ ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್ ಆಗಿರುವ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಅದರಂತೆ ಜೂನ್ 23 ರಂದು ಮುಂದಿನ ಗುರುವಾರ ಟ್ರೈಲರ್ ರಿಲೀಸ್ ಆಗಲಿದೆ.
'Once You Enter The Maze, Escape is Not An Option'
Vikrant Rona Official Trailer on 23rd June. Get Ready!!!#VikrantRonaTrailer #VRTrailerOnJune23 @anupsbhandari @JackManjunath @shaliniartss @InvenioF @ZeeStudios_ #VRonJuly28 #VRin3D pic.twitter.com/QPr19w8wni
— Kichcha Sudeepa (@KicchaSudeep) June 17, 2022
ಕೆಲವು ದಿನಗಳ ಹಿಂದೆ ಜಾಕ್ವೆಲಿನ್ ಫರ್ನಾಂಡಿಸ್ ಅವರ ‘ರಾ ರಾ ರಕ್ಕಮ್ಮ’ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಈ ಹಾಡು ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಈಗ ಟ್ರೈಲರ್ ಮೂಲಕ ಅಭಿಮಾನಿಗಳ ನಿರೀಕ್ಷೆ ತಣಿಸಲು ಚಿತ್ರ ತಂಡ ಸಜ್ಜಾಗಿದೆ.
ವಿಕ್ರಾಂತ್ ರೋಣ ಜುಲೈ 28 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಚಿತ್ರ ರಿಲೀಸ್ ಗೂ ಮುನ್ನ ಟ್ರೈಲರ್ ಮತ್ತು ಮತ್ತಷ್ಟು ಹಾಡುಗಳ ಮೂಲಕ ಮೋಡಿ ಮಾಡಲು ನಿರ್ದೇಶಕ ಅನೂಪ್ ಭಂಡಾರಿ ಯೋಜನೆ ರೂಪಿಸಿಕೊಂಡಿದ್ದಾರೆ.