ವಿಜಯಪುರ: ಜಮೀನ್ ಪಹಣಿ ಪತ್ರ ತಿದ್ದುಪಡಿಗೆ 25 ಸಾವಿರ ರೂ ಲಂಚ ಬೇಡಿಕೆ ಇಟ್ಟಿದ್ದ ಲೆಕ್ಕಾಧಿಕಾರಿ , ಎಸಿಬಿ ದಾಳಿ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ತಹಶೀಲ್ದಾರ್ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಗ್ರಾಮ ಲೆಕ್ಕಾಧಿಕಾರಿ ಮೇಲಪ್ಪಗೌಡ ಬಿರಾದಾರ್, ಜಮೀನ್ ಪಹಣಿ ಪತ್ರ ತಿದ್ದುಪಡಿಗೆ 25 ಸಾವಿರ ಹಣ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಲೆಕ್ಕಾಧಿಕಾರಿ 25 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿಗೆ ಸಿಕ್ಕಿಬಿದ್ದಿದ್ದಾರೆ. ಎಸಿಬಿ ಎಸ್ಪಿ ಬಿ ಎಸ್ ನೇಮಗೌಡ ಹಾಗೂ ಡಿಎಸ್ಪಿ ಮಂಜುನಾಥ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಲೆಕ್ಕಾಧಿಕಾರಿಯ ಬಂಡವಾಳ ಬಯಲಾಗಿದೆ.

ಇದನ್ನೂ ಓದಿ: ನ್ಯೂಇಯರ್ ಕಿಕ್ ಇಳಿಸಿದ ಓಮಿಕ್ರಾನ್… ಬೆಂಗಳೂರಿನಲ್ಲಿ ಕರ್ಫ್ಯೂ ವೇಳೆ 144 ಸೆಕ್ಷನ್ ಜಾರಿ…!