ವಿಜಯಪುರ: ನಗರದ ರಂಭಾಪೂರ ಗ್ರಾಮದಲ್ಲಿ ಶ್ರೀಹನುಮಾನ್ ಕಟಂಬಲಿ ಉತ್ಸವದ ಅಂಗವಾಗಿ ಕುದುರೆ ಹಾಗೂ ಎತ್ತಿನ ಬಂಡಿ ರೇಸ್ ನಡೆದಿದೆ.
ಎತ್ತಿನ ಬಂಡಿ ರೇಸ್‌ನಲ್ಲಿ ಒಂದು ಎತ್ತು, ಇನ್ನೊಂದು ಕುದುರೆ ಬಂಡಿಗೆ ಕಟ್ಟಿ ರೇಸ್ ಪಂದ್ಯ ಆಯೋಜನೆ ಮಾಡಲಾಗಿತ್ತು. ಅಲ್ಲದೇ, ರೇಸ್ ಸಂದರ್ಭದಲ್ಲಿ ಪ್ರೇಕ್ಷಕರ ಸ್ಥಳಕ್ಕೆ ಎತ್ತು ನುಗ್ಗಿ ಕೆಲ ಹೊತ್ತು ರಂಪಾಟ ಮಾಡಿತ್ತು. ಎತ್ತಿನ ಮಾಲೀಕ ಎತ್ತನ್ನು ಸಂಬಾಳಿಸಿ ಮತ್ತೆ ರೇಸ್‌ಗೆ ಅನುವು ಮಾಡಿಕೊಟ್ಟರು. ರೇಸ್ ನೋಡಲು ವಿಜಯಪುರ, ಬಾಗಲಕೋಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನತೆ ಆಗಮಿಸಿದ್ದರು.
ಊರಿನ ಗ್ರಾಮಸ್ಥರು ಅಂಬಲಿ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಿದರು. ಗ್ರಾಮದಲ್ಲಿರುವ ಹನುಮಾನ್ ದೇವಾಲಯದಲ್ಲಿ ರಂಭಾಪೂರ ನಿವಾಸಿಗಳು ಮನೆಯಲ್ಲಿ ಮಾಡಿರುವ ವಿವಿಧ ಬಗೆಯ ಪಲ್ಯೆ, ಖಡಕ್ ಜೋಳದ ರೊಟ್ಟಿ, ಅಂಬಲಿ, ಮೊಸರು ಸೇರಿದಂತೆ ಅಂಬಲಿ ಜಾತ್ರೆ ಮಾಡಿದರು. ಅಂಬಲಿ ಜಾತ್ರೆ ವಿಶೇಷವೆಂದರೆ ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ಮಾತ್ರ ಅಂಬಲಿ ಜಾತ್ರೆಯಲ್ಲಿ ಬಳಕೆ ಮಾಡುತ್ತಾರೆ. ಅಲ್ಲದೇ, ಅಂಬಲಿ ಜಾತ್ರೆ ಮುಗಿಯುವವರೆಗೂ ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ಮಾರಾಟ ಮಾಡಲ್ಲ. ಜಾತ್ರೆ ಬಳಿಕವೇ ಜಮೀನಿನ ಬೆಳೆಗಳನ್ನು ಗ್ರಾಮಸ್ಥರು ಮಾರಾಟ ಮಾಡುತ್ತಾರೆ. ಗ್ರಾಮದ ಜನತೆ ಹಾಗೂ ಜಾತ್ರೆ ನೋಡಲು ಬಂದಿರುವ ಭಕ್ತರಿಗೆ ಊಟದ ವ್ಯವಸ್ಥೆ ಮಾಡಿದ್ದರು.
ಇದನ್ನೂ ಓದಿ : ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಅವರ ದೊಡ್ಡಪ್ಪ ಕಾರಣ… ಸಚಿವ ಕೆ.ಸಿ. ನಾರಾಯಣ ಗೌಡ…