ವಿಜಯಪುರ : ವಿಜಯಪುರದಲ್ಲಿ ಹಿಜಾಬ್ಗಾಗಿ ಪ್ರತಿಭಟನೆ ನಡೆಸುತ್ತಿದ್ದು, ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಕ್ಲಾಸ್ಗೆ ಬಂದಿದ್ದು, ಹಿಜಾಬ್ ಇಲ್ಲದೇ ನಾವು ಕ್ಲಾಸ್ಗೆ ಬರಲ್ಲ ಎಂದು ವಿದ್ಯಾರ್ಥಿನಿಯರ ಹಠ ಹಿಡಿದಿದ್ಧಾರೆ.
ವಿಜಯಪುರದ ಗಾಂಧಿಚೌಕ್ ಬಳಿಯ ಸರ್ಕಾರಿ ಮಹಿಳಾ ಪಿಯು ಕಾಲೇಜಿನಲ್ಲಿ ದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಕ್ಲಾಸ್ಗೆ ಬಂದಿದ್ದಾರೆ. ಕಾಲೇಜು ಆಡಳಿತ ಮಂಡಳಿಯು ಹಿಜಾಬ್ ತೆಗೆಯಲು ಸೂಚಿಸಿದ್ದಾರೆ. ವಿದ್ಯಾರ್ಥಿನಿಯರು ಹಿಜಾಬ್ ಇಲ್ಲದೇ ನಾವು ಕ್ಲಾಸ್ಗೆ ಬರಲ್ಲ ಎಂದು ಹಠ ಹಿಡಿದಿದ್ಧಾರೆ.
ಹಿಜಾಬ್ಗೆ ಅವಕಾಶ ಸಿಗದೇ ತರಗತಿಯಿಂದ ವಾಪಸ್ ಆಗಿದ್ದು, ವಿದ್ಯಾರ್ಥಿನಿಯರು ಕಾಲೇಜು ಗೇಟ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಅಧಿಕಾರಿಗಳು ವಿದ್ಯಾರ್ಥಿಗಳನ್ನು ಸಮಾಧಾನ ಮಾಡುತ್ತಿದ್ದು , ಉಪನ್ಯಾಸಕರು ವಿದ್ಯಾರ್ಥಿಗಳ ಮನವೊಲಿಸಲು ಹರಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ : 45ನೇ ವಸಂತಕ್ಕೆ ಕಾಲಿಟ್ಟ ಚಾಲೆಂಜಿಂಗ್ ಸ್ಟಾರ್..! ನನ್ನ ಪ್ರೀತಿಯ ದರ್ಶನ್ ಎಂದು ಬರ್ತಡೇ ವಿಶ್ ಮಾಡಿದ ಸಂಸದೆ ಸುಮಲತಾ…!