ವಿಜಯಪುರ : ವಿಜಯಪುರ ಪೊಲೀಸ್ ಇಲಾಖೆಯ ಹೆಸರಲ್ಲಿ ನಕಲಿ ಫೇಸ್ಬುಕ್ ಅಕೌಂಟ್ ಮಾಡಲಾಗಿದ್ದು , ಇನ್ನು ನಕಲಿ ಅಕೌಂಟ್‌ನಿಂದ ಜನತೆಗೆ ಹಣ ನೀಡುವಂತೆ ಆನ್ಲೈನ್ ಮೂಲಕ ಹಣ ನೀಡುವಂತೆ ಮೆಸೇಜ್ ಮಾಡಿರುವ ಘಟನೆಯೊಂದು ನಡೆದಿದೆ.
ಈ ಘಟನೆಯೂ ಗುಮ್ಮಟನಗರಿ ಖ್ಯಾತಿಯ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆಯ ನಕಲಿ ಫೇಸ್ಬುಕ್ ಅಕೌಂಟ್ ಮಾಡಲಾಗಿದ್ದು , ಆ ನಕಲಿ ಅಕೌಂಟ್‌ನಿಂದ ಜನತೆಗೆ ಹಣ ನೀಡುವಂತೆ ಆನ್ಲೈನ್ ಮೂಲಕ ಹಣ ನೀಡುವಂತೆ ಮೆಸೇಜ್ ಮಾಡಲಾಗುತ್ತಿದೆ. ಅದಕ್ಕಾಗಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಜಿಲ್ಲಾ ಪೊಲೀಸ ಇಲಾಖೆಯ ಹೆಸರಿನಲ್ಲಿ ನಕಲಿ ಅಕೌಂಟ್ ಮಾಡಲಾಗಿದೆ. ಅದಕ್ಕಾಗಿ ದಯವಿಟ್ಟು ಹಣ ಕೇಳಿದ್ರೇ ಹಣ ನೀಡದಂತೆ ಎಸ್ಪಿ ಆನಂದಕುಮಾರ ಜನತೆಯಲ್ಲಿ ಮನವಿ ಮಾಡಿದರು. ಅದಕ್ಕಾಗಿ ಜನತೆ ಯಾವುದೇ ಕಾರಣಕ್ಕೂ ಹಣ ನೀಡಬೇಡಿ. ಅಲ್ಲದೇ, ಇಂತಹ ಕೆಲಸಗಳನ್ನು ಮಾಡುತ್ತಿರುವ ವಿರುದ್ಧ ಕ್ರಮ ತೆಗದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕೇಸರಿ ಕೋಲಾಹಲದ ನಡುವೆ ಡಿಕೆಶಿ-ಈಶ್ವರಪ್ಪ ಫೈಟ್.. ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋದ ಜಟಾಪಟಿ ..