ವಿಜಯಪುರ: ವಿಜಯಪುರ ನಿರ್ಮಿತಿ ಕೇಂದ್ರದ ಅಧಿಕಾರಿ ಮೇಲೆ ರೇಡ್ ಮಾಡಲಾಗಿದ್ದು, ಪ್ರಾಜೆಕ್ಟ್ ಮ್ಯಾನೇಜರ್ ಗೋಪಿನಾಥ್ ಮಾಲಗಿ ಮೇಲೆ ದಾಳಿ ನಡೆಸಲಾಗಿದೆ.
ಎಸಿಬಿ ಅಧಿಕಾರಿಗಳು ಸೊಲ್ಲಾಪುರ ರಸ್ತೆಯಲ್ಲಿರುವ ಗೋಪಿನಾಥ್ ಮಾಲಗಿ ನಿವಾಸ, ಕಚೇರಿಗಳಲ್ಲಿ ಪರಿಶೀಲನೆ ಮಾಡುತ್ತಿದ್ದು, ನಿರ್ಮಿತಿ ಕೇಂದ್ರದ ಸ್ಟೋರ್ನಲ್ಲೂ ಪರಿಶೀಲನೆ ಮಾಡಲಾಗುತ್ತಿದೆ. ನಿರ್ಮಿತಿ ಕೇಂದ್ರದ ಅಕೌಂಟೆಂಟ್ ಮಲ್ಲಮ್ಮಗೂ ಶಾಕ್ ಎದುರಾಗಿದ್ದು, ರಾಮದೇವ ನಗರದಲ್ಲಿರುವ ಮಲ್ಲಮ್ಮ ಮನೆಯಲ್ಲಿ ಶೋಧ ನಡೆಸಲಾಗುತ್ತಿದೆ.
ಎಸಿಬಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.