ವಿಜಯಪುರ: ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಗುಮ್ಮಟ ನಗರಿ ಖ್ಯಾತಿಯ ವಿಜಯಪುರ ನಗರದ ಐನಾಪುರ ಕ್ರಾಸ್ ನ ನಿವಾಸಿಗಳಾದ ಪೂಜಾ ಜಹಾಗೀರದಾರ ಮತ್ತು ಅವರ ತಾಯಿ ಕವಿತಾ ಜಹಾಗೀರದಾರ ಅವರು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಪೂಜಾ ಜಹಾಗೀರದಾರ ಅವರು ಸೌಂದರ್ಯ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿದರೆ, ಬ್ಯೂಟಿಷಿಯನ್ ಆಗಿರುವ ಅವರ ತಾಯಿ ಕವಿತಾ ಅವರು ಬೆಸ್ಟ್ ಫೋಟೋಜನಿಕ್ ಫೇಸ್ ಅವಾರ್ಡ್ ಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ: ಮುಜರಾಯಿ ಇಲಾಖೆಯಿಂದ ದೇಗುಲಗಳಿಗೆ ಮುಕ್ತಿ?… ಹೊಸ ಕಾನೂನಿನ ಸುಳಿವು ಕೊಟ್ಟ ಸಿಎಂ ಬೊಮ್ಮಾಯಿ…
ಇಂಟರ್ ನ್ಯಾಷನಲ್ ಬ್ಯೂಟಿ ಪೆಜೆಂಟ್ ಸೀ ವೈಬ್ಸ್ ಸೌಂದರ್ಯ ಸ್ಪರ್ಧೆಯ ಫಿನಾಲೆ ಯನ್ನು ಗೋವಾದಲ್ಲಿ ಆಯೋಜಿಸಲಾಗಿತ್ತು. ಬೇರೆ ಬೇರೆ ರಾಜ್ಯಗಳಿಂದ ಸ್ಪರ್ಧಿಗಳು ಆಗಮಿಸಿದ್ದರು. ನಾನು ಆ ಸ್ಪರ್ಧೆಯಲ್ಲಿ ವಿಜೇತಳಾಗಿದ್ದೇನೆ ಎಂದು ಪೂಜಾ ಜಹಾಗೀರದಾರ ಅವರು ತಿಳಿಸಿದ್ದಾರೆ.