ವಿಜಯಪುರ: ಕರೆಂಟ್ ಬಿಲ್ ಕೇಳಲು ಹೋಗಿದ್ದ ಅಧಿಕಾರಿಗೆ ಮನೆ ಮಾಲೀಕನೋರ್ವ ಮಚ್ಚು ತೋರಿಸಿ ಹಲ್ಲೆಗೆ ಯತ್ನಿಸಿರುವ ಘಟನೆ ವಿಜಯಪುರ ತಾಲ್ಲೂಕಿನ ಜುಮನಾಳ ಗ್ರಾಮದಲ್ಲಿ ನಡೆದಿದೆ.
ವಿಜಯಪುರ ಕೆಇಬಿ ಎಇಇ ಎ.ಎಸ್. ದೊಡ್ಡಿಮನಿಗೆ ಮಚ್ಚು ತೋರಿಸಿ ಮನೆ ಮಾಲೀಕ ಹಲ್ಲೆಗೆ ಯತ್ನಿಸಿದ್ದಾನೆ. ಕಳೆದ ಹಲವು ತಿಂಗಳಿಂದ ಮನೆಯ ಮಾಲೀಕ ಭೀಮು ಮನಗೂಳಿ ಕರೆಂಟ್ ಬಿಲ್ ಕಟ್ಟಿಲ್ಲ. ಈ ಹಿನ್ನೆಲೆಯಲ್ಲಿ ದೊಡ್ಡಿಮನಿಯವರು ಕರೆಂಟ್ ಬಿಲ್ ಕಟ್ಟುವಂತೆ ಹೇಳಲು ಗ್ರಾಹಕನ ಮನೆಗೆ ಹೋಗಿದ್ದಾರೆ.
ಇದನ್ನೂ ಓದಿ: ರಾಯಬಾಗದಲ್ಲಿ ಹೆಸ್ಕಾಂ ಅಧಿಕಾರಿ, ಸಿಬ್ಬಂದಿಯ ಗುಂಡಾ ವರ್ತನೆ… ಗ್ರಾಹಕನಿಗೆ ಪೊರೆಕೆಯಿಂದ ಹೊಡೆದ ಹೆಸ್ಕಾಂ ಅಧಿಕಾರಿ…
ಈ ವೇಳೆಯಲ್ಲಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಮನೆಯ ಮಾಲೀಕ ಮಚ್ಚು ತೋರಿಸಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಇನ್ನು ಮನೆಯ ಅಕ್ಕಪಕ್ಕದವರ ಮಚ್ಚು ಕಸಿದುಕೊಂಡು ಗಲಾಟೆ ತಣ್ಣಗೆ ಮಾಡಿದ್ದಾರೆ. ಹಲವು ದಿನಗಳ ಹಿಂದೆ ನಡೆಸಿದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.