ವಿಜಯಪುರ: ಗಂಡ ಹೆಂಡತಿಯ ಜಗಳ ಬಿಡಿಸಲು ಮಧ್ಯ ಬಂಧವನೇ ಭೀಕರವಾಗಿ ಕೊಲೆಯಾಗಿರುವ ಘಟನೆ ವಿಜಯಪುರದ ಗುರುಪಾದೇಶ್ವರ ನಗರದಲ್ಲಿ ನಡೆದಿದೆ.
ಪರುಶರಾಮ ಅಬಟೇರಿ (30) ಮೃತಪಟ್ಟಿರುವ ದುರ್ದೈವಿ. ವಿಜಯಪುರದ ಖಾಸಗಿ ಕಂಪನಿಯಲ್ಲಿ ಪರಶುರಾಮ ಉದ್ಯೋಗಿದ್ದಾರೆ. ಕೆಇಬಿ ನಿವೃತ್ತ ನೌಕರ ಇಜೇರಿ ಎಂಬುವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ.. ಮನೆಯ ಮಾಲೀಕನ ಮಗ ಮತ್ತು ಆತನ ಹೆಂಡತಿ ಜಗಳವಾಡುತ್ತಿದ್ದರು. ಜಗಳ ಬಿಡಿಸಲು ಪರುಶರಾಮ ಹೋಗಿದ್ದಾನೆ. ಈ ಸಂದರ್ಭದಲ್ಲಿ ಜಗಳ ವಿಕೋಪ ಹೋಗಿ ಹೆಂಡತಿಯ ಸಂಬಂಧಿಕರು ಪರಶುರಾಮನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.