ವಿಜಯಪುರ: ಬಾಲಕನ ಮೇಲೆ ಬೀದಿನಾಯಿಯೊಂದು ದಾಳಿ ಮಾಡಿದ್ದು, ಬಾಲಕನಿಗೆ ತೀವ್ರ ಗಾಯಗಳಾಗಿವೆ.
ವಿಜಯಪುರ ನಗರದ ಕೊಂಚಿಕೊರವರ ಓಣಿಯಲ್ಲಿ ಘಟನೆ ನಡೆದಿದೆ. 9 ವರ್ಷದ ವಿಷ್ಣು ಅಂಗಡಿಗಎ ಹೋಗಿದ್ದಾಗ ಆ ವೇಳೆಯಲ್ಲಿ ಬೀದಿನಾಯಿಯೊಂದು ಆತನ ಮೇಲೆ ಅಟ್ಯಾಕ್ ಮಾಡಿದೆ. ಕೈ ರೆಟ್ಟೆ, ಬೆನ್ನಿನ ಭಾಗದಲ್ಲಿ ಹುಚ್ಚು ನಾಯಿ ಕಚ್ಚಿದ್ದು, ಸ್ಥಳೀಯರು ಬಾಲಕನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಸಿಸಿಟಿವಿಯಲ್ಲಿ ನಾಯಿ ದಾಳಿ ನಡೆಸುವ ದೃಶ್ಯ ಸೆರೆಯಾಗಿದೆ.
ಗೋಳಗುಮ್ಮಟ ಏರಿಯಾದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ನಾಯಿಗಳಿಗೆ ಕಡಿವಾಣ ಹಾಕುವಂತೆ ಸ್ಥಳೀಯರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಸಾಹಿತಿ ಚಂದ್ರಶೇಖರ್ ಕಂಬಾರ ಪತ್ನಿ ಸತ್ಯಭಾಮ ಕಂಬಾರ ಇನ್ನಿಲ್ಲ…!