ಬೆಂಗಳೂರು: ವೈಷ್ಣವಿ ಮ್ಯಾರೇಜ್ ಸ್ಟೋರಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಆಡಿಯೋ ಬಿಟ್ಟ ನಟಿ ವಿರುದ್ಧ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ವಿದ್ಯಾಭರಣ್ ದೂರು ನೀಡಿದ್ದಾರೆ.
ವಕೀಲರ ಜೊತೆ ತೆರಳಿ ದೂರು ನೀಡಿದ ವಿದ್ಯಾಭರಣ, ಇಂಥಾ ಮನೆ ಮುರುಕರನ್ನು ಸುಮ್ಮನೆ ಬಿಡಲ್ಲ,ಕೋರ್ಟ್ ಕಟಕಟೆಗೂ ಎಳೆದು ತಂದು ಶಿಕ್ಷೆ ಕೊಡಿಸುವೆ. ನನ್ನ ಮದುವೆ ಮುರಿಯಲು ಹಿತ ಶತ್ರುಗಳೇ ಸಂಚು ಮಾಡಿದ್ದಾರೆ,ಸದ್ಯಕ್ಕೆ ಮದುವೆ ವಿಚಾರದಲ್ಲಿ ನಾವು ಮುಂದುವರೆಯಲ್ಲ, ಈಗಾಗಲೇ ವೈಷ್ಣವಿಗೌಡ ಜತೆಯೂ ಮಾತಾಡಿದ್ದೇನೆ.ಇದೆಲ್ಲಾ ಆರೋಪಗಳಿಗೆ ಕಾನೂನು ಮೂಲಕವೇ ಉತ್ತರ ಕೊಡ್ತೀನಿ ಎಂದು ದೂರು ನೀಡಿದ ಬಳಿಕ ವಿದ್ಯಾಭರಣ ಹೇಳಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ:ಒಂದೇ ದಿನದಲ್ಲಿ 32 ಸಾವಿರಕ್ಕೂ ಹೆಚ್ಚು ಕೇಸ್ ಪತ್ತೆ..! ಕೊರೋನಾ ಮೀಟರ್ ಓಟಕ್ಕೆ ಚೀನಾ ಹೈರಾಣ..!