ಬೆಂಗಳೂರು: KMF ಹಾಲು ಪೂರೈಕೆದಾರರು ಹಠ ಬಿಡದೇ ಮುಷ್ಕರ ಮುಂದುವರೆಸಿದ್ದಾರೆ. ಇಂದೂ ಬೆಂಗಳೂರಿನ ಹಲವೆಡೆ ನಂದಿನಿ ಹಾಲು ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಹಾಗೂ KMF ಹಾಲು ಪೂರೈಕೆದಾರರು ಮುಷ್ಕರ ನಡೆಸುತ್ತಿದ್ದಾರೆ.
ಕೆಲವೆಡೆ ನಂದಿನಿ ಬೂತ್ಗಳಲ್ಲಿ ಹಾಲು, ಮೊಸರು ಸಿಗದೇ ಜನ ವಾಪಸ್ ಆಗಿದ್ದಾರೆ. ಕಳೆದ 2 ದಿನಗಳಿಂದ ಕೆಎಂಎಫ್ ನಂದಿನಿ ಹಾಲು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಹಾಲು ಪೂರೈಕೆ ಲಾರಿ ಮಾಲೀಕರು ಹಾಗೂ ಚಾಲಕರಿಂದ ಪ್ರತಿಭಟನೆ ನಡೆಸಲಾಗುತ್ತಿದ್ದು, ಹಾಲು ಪೂರೈಕೆದಾರರಿಗೆ ಹೆಚ್ಚಿನ ಹಣ ನಿಗದಿ ಮಾಡುವಂತೆ ಆಗ್ರಹಿಸಿದ್ದಾರೆ. ನಿನ್ನೆ ಮಧ್ಯಾಹ್ನದಿಂದ ಕೆಲವಡೆ ಸಪ್ಲೈ ಸ್ಥಗಿತಗೊಳಿಸಿರುವ ಸಪ್ಲೈಯರ್ಸ್, ಕೆಎಂಎಫ್ ಕಚೇರಿ ಮುಂದೆ ಹಾಲಿನ ಲಾರಿಗಳನ್ನ ನಿಲ್ಲಿಸಿ ಪ್ರತಿಭಟನೆ ಮಾಡಿತ್ತಿದ್ದಾರೆ. 250ಕ್ಕೂ ಹೆಚ್ಚು ಲಾರಿ ಮಾಲೀಕರು ಹಾಗೂ ಚಾಲಕರಿಂದ ಸಪ್ಲೈ ಬಂದ್ ಆಗಿದ್ದು, ಒಂದು ಟ್ರಿಪ್ಗೆ 1000-1300 ರೂಪಾಯಿ ಪಾವತಿ ಮಾಡ್ತಿರೋ KMFಗೆ ಕಿಲೋಮೀಟರ್ ಆಧಾರದ ಮೇಲೆ ಪಾವತಿ ಹಣ ಹೆಚ್ಚಿಸಲು ಆಗ್ರಹ ಮಾಡಿದ್ದಾರೆ. ಡಿಸ್ಟ್ರಿಬ್ಯೂಟರ್ಸ್ ಕಳೆದ 6 ತಿಂಗಳಿಂದ ಪತ್ರ ಬರೆದು ಮನವಿ ಮಾಡಿದ್ದು, ಪ್ರತಿದಿನ ಬೆಳಗ್ಗೆ 25 ಕ್ರೇಟ್ ಹಾಲು ಬರುತ್ತಿತ್ತು, ಬೆಳಗ್ಗೆ ಸಂದರ್ಭದಲ್ಲಿ ಈಗ 20 ಕ್ರೇಟ್ ಮಾತ್ರ ಪೂರೈಕೆಯಾಗುತ್ತಿದೆ ಹಾಗೂ ಮಧ್ಯಾಹ್ನ, ಸಂಜೆ ವೇಳೆ ಹಾಲು ಸಿಗದೇ ಕೆಲವೆಡೆ ಪರದಾಟ ಅನುಭವಿಸುವಂತಾಗಿದೆ.
ಇದನ್ನೂ ಓದಿ:ಬಳ್ಳಾರಿಯಲ್ಲಿ 23 ಅಡಿ ಎತ್ತರದ ನಟ ಪುನಿತ್ ರಾಜ್‍ಕುಮಾರ್ ಪುತ್ಥಳಿ ಅನಾವರಣ…