ಖಾರ್ಕೀವ್: ಉಕ್ರೇನ್ನಲ್ಲಿ ಇನ್ನೂ ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದು, ಡೆಡ್ಲೈನ್ ಬೆನ್ನಲ್ಲೇ ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.
ಖಾರ್ಕಿವ್ ನಗರದ ಬಂಕರ್ಗಳಲ್ಲೇ 2000 ವಿದ್ಯಾರ್ಥಿಗಳಿದ್ದು, ಮೆಟ್ರೋ ನಿಲ್ದಾಣ ಸೇರಿ ಹಲವೆಡೆ ಸ್ಟೂಡೆಂಟ್ಸ್ ಸಿಲುಕಿದ್ದಾರೆ. ಖಾರ್ಕಿವ್ ಮೆಟ್ರೋ ಸ್ಟೇಷನ್ನಲ್ಲೇ 23 ವಿದ್ಯಾರ್ಥಿಗಳಿದ್ದು, ಭಾರತೀಯ ರಾಯಭಾರ ಕಚೇರಿಯ ಸಂದೇಶ ನಂತರ ರೈಲು ನಿಲ್ದಾಣಕ್ಕೆ ಬಂದಿದ್ದ ವಿದ್ಯಾರ್ಥಿಗಳು ರೈಲಿನಲ್ಲಿ ಹೋಗಲು ಅವಕಾಶ ಸಿಗದೇ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಭಾರತದ ಧ್ವಜ ಹಿಡಿದು ನಿಲ್ದಾಣಗಳತ್ತ ವಿದ್ಯಾರ್ಥಿಗಳು ಬರುತ್ತಿದ್ದು, ಖೋಲ್ಯಾಂಡೋದಲ್ಲಿ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಲುಕಿದ್ದಾರೆ. ಕೀವ್ ರೈಲು ನಿಲ್ದಾಣದಲ್ಲೂ ಸಾವಿರಾರು ಮಂದಿ ಪರದಾಡುತ್ತಿದ್ದು,
ಪೋಲ್ಯಾಂಡ್ ಒಂದರಲ್ಲೇ 12000 ಪ್ರಯಾಣಿಕರಿದ್ದಾರೆ.
ಇದನ್ನೂ ಓದಿ:ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ… ಎರಡು ಠಾಣೆಯ ಪೊಲೀಸರ ವಿರುದ್ಧ ತನಿಖೆ ನಡೆಯುತ್ತಿದೆ: ಆರಗ ಜ್ಞಾನೇಂದ್ರ…