ಉಡುಪಿ : ಉಡುಪಿಯಲ್ಲಿ ಮಳೆರಾಯ ಆರ್ಭಟ ಮುಂದುವರಿದ್ದು, ಮುಂಜಾನೆಯಿಂದಲೇ ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆಯಿಂದ ಈ ಮೊದಲೆ ಮಳೆ ಮುನ್ನೆಚ್ಚರಿಕೆ ನೀಡಲಾಗಿತ್ತು. ಜಿಲ್ಲಾಧಿಕಾರಿ ಕೂರ್ಮರಾವ್ ಆಯಾ ಶಾಲೆಗಳಿಗೆ ರಜೆ ನೀಡುವ ಅಧಿಕಾರ ನೀಡಿದ್ದಾರೆ.
ಇಂದು ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಜೊತೆ ಭಾರಿ ಮಳೆಯಾಗುತ್ತಿದೆ. ಮುನ್ನೆಚ್ಚರಿಕೆ ಹಿನ್ನಲೆಯಲ್ಲಿ ಶಾಲಾ ಹಂತದಲ್ಲೆ ರಜೆ ಸೂಚಿಸಲು ಜಿಲ್ಲಾಧಿಕಾರಿ ಕೂರ್ಮರಾವ್ ಆದೇಶ ನೀಡಿದ್ದಾರೆ. ಆಯಾ ಶಾಲೆಗಳಿಗೆ ರಜೆ ನೀಡುವ ಅಧಿಕಾರ ನೀಡಿದ್ದಾರೆ. ಗಾಳಿ ಮಳೆ ಹೆಚ್ಚಾದರೆ ಹಾಗೂ ನೆರೆ ಭೀತಿ ಇದ್ದಲ್ಲಿ ರಜೆ ನೀಡುವಂತೆ ಸೂಚನೆ ನೀಡಿದ್ದಾರೆ.
ವರದಿ : ಮಂಜುನಾಥ್
ಸ್ಥಳ : ಉಡುಪಿ
ಇದನ್ನೂ ಓದಿ : BJP ಮುಖಂಡ ಅನಂತರಾಜು ಡೆತ್ನೋಟ್ ಮೇಲಿದೆ ನೂರೆಂಟು ಅನುಮಾನ…! ಅನಂತರಾಜು ನಿಜವಾಗ್ಲೂ ಡೆತ್ ನೋಟ್ ಬರೆದಿದ್ರಾ..?