ಉಡುಪಿ: ಒಂಟಿಯಾಗಿ ಓಡಾಡುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ ನಟೋರಿಯಸ್ ಆರೋಪಿಯನ್ನು ಬೈಂದೂರು ಪೊಲೀರು ಬಂಧಿಸಿದ್ದಾರೆ.
ಅನೇಕ ಸುಲಿಗೆ ಹಾಗೂ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ವಿಜಯ್ ( 48 ) ಯನ್ನು ಬೈಂದೂರು ಸಿಪಿಐ ತಂಡ ಮುಂಬಯಿ ಬಳಿಯ ಕೇಂದ್ರಾಡಳಿತ ಪ್ರದೇಶವಾದ ದಮನ್ ಬಳಿ ಬಂಧಿಸಿದೆ. ವೃತ್ತ ನೀರಿಕ್ಷಕ ಸಂತೋಷ್ ಕಾಯ್ಕಿಣಿ ನೇತ್ರತ್ವದ ಕಾರ್ಯಚರಣೆ ನಡೆದಿದ್ದು, ಆರೋಪಿಯಿಂದ 3,24,500 ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ.. ಮೂವರ ಬಂಧನ..! ಓರ್ವನಿಗಾಗಿ ಹುಡುಕಾಟ..