ಉಡುಪಿ: ಉಡುಪಿಯ ಟೋಲ್ ಗೇಟ್ ಬಳಿ ಐಷರ್ ವಾಹನ ಹೊತ್ತಿ ಉರಿದಿರುವ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಹೆಜಮಾಡಿ ಟೋಲ್ ಗೇಟ್ ಬಳಿ ಐಷರ್ ವಾಹನ ಬೆಂಕಿಗಾಹುತಿಯಾಗಿದೆ. ಎಂ.ಸಿ.ಎಫ್ನಿಂದ ಭದ್ರಾವತಿಗೆ ವಾಹನ ತೆರಳುತ್ತಿತ್ತು. ವಾಹನ ನಿಲ್ಲಿಸಿ ಅಡುಗೆ ಮಾಡುತ್ತಿದ್ದ ವೇಳೆ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಡ್ರೈವರ್ ನವೀದ್ ಪಾಷಾ ವಾಹನದಿಂದ ಜಂಪ್ ಮಾಡಿ ಪ್ರಾಣ ಉಳಿಸಿಕೊಂಡಿದ್ದಾರೆ.