ಮುಂಬೈ : ಸಿಂಗಲ್ ಆಗಿರೋ ಹುಡುಗರು ಈ ಸ್ಟೋರಿ ನೋಡಲೇಬೇಕು. ಮದುವೆಯಾಗಲು ಪ್ಲಾನ್ ಮಾಡ್ತಿರೋ ಹುಡುಗರು ಒಮ್ಮೆ ಈ ಸುದ್ದಿ ಓದಿ….
ಮದುವೆ ಆಗಬೇಕು ಎನ್ನುತ್ತಿರುವ ಹುಡುಗರಿಗೆ ಹೆಣ್ಣೇ ಸಿಗದೆ ಹುಡುಗಿ ಹುಡುಕಿ ಸುಸ್ತಾಗಿ ಹೋಗಿರ್ತಾರೆ.
ಮದುವೆ ಸಹವಾಸ ಬೇಡಪ್ಪ ಅಂತಾ ಬೇಸರ ಪಟ್ಟುಕೊಂಡಿರುತ್ತಾರೆ. 19 ವರ್ಷದ ಹುಡುಗಿಯರು 70 ವರ್ಷದ ವ್ಯಕ್ತಿಯನ್ನು ಮದುವೆ ಆಗಿದ್ದಾರೆ. ಶ್ರೀಮಂತ ಮನೆತನದ ಏಕೈಕ ಪುತ್ರಿ ಕಾರ್ ಡ್ರೈವರ್ನನ್ನು ಮದ್ವೆಯಾಗಿದ್ದಾರೆ. ಆದ್ರೆ ಈಗ ಸುದ್ದಿಓದಿದರೆ ನೀವು ಶಾಕ್ ಆಗ್ತೀರಾ..!
ಅವಳಿ ಸಹೋದರಿಯರು ಒಬ್ಬನನ್ನೇ ಮದುವೆಯಾಗಿದ್ದಾರೆ. ರಿಂಕಿ-ಪಿಂಕಿ ಜೊತೆ ಅತುಲ್ ವಿವಾಹ ಅದ್ದೂರಿಯಾಗಿ ಆಗಿದೆ. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಅಕ್ಲುಜ್ ಗ್ರಾಮದಲ್ಲಿ ಮದುವೆ ನಡೆದಿದೆ. ರಿಂಕಿ ಮತ್ತು ಪಿಂಕಿ ಅವಳಿ ಸಹೋದರಿಯರು ಮುಂಬೈ ಮೂಲದವರು. ರಿಂಕಿ ಮತ್ತು ಪಿಂಕಿ ಇಬ್ಬರು ಸಾಫ್ಟ್ವೇರ್ ಎಂಜಿನಿಯರ್ಗಳಾಗಿದ್ದಾರೆ. ಬಾಲ್ಯದಿಂದಲೂ ಒಂದೇ ಮನೆಯಲ್ಲಿ ಒಟ್ಟಿಗೆ ಇದ್ದಾರೆ. ಯಾವತ್ತೂ ಇಬ್ಬರು ದೂರ ಹೋಗಿದ್ದೇ ಗೊತ್ತಿಲ್ಲ. ಇಬ್ಬರು ಒಬ್ಬರನ್ನೊಬ್ಬರು ತುಂಬಾ ಹಚ್ಚಿಕೊಂಡಿದ್ದಾರೆ.
ಅದಕ್ಕೆ ಒಬ್ಬನನ್ನೇ ಮದುವೆ ಆಗಲು ನಿರ್ಧಾರ ಮಾಡಿದ್ದಾರೆ. ಎರಡು ಕುಟುಂಬದವರು ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದೇ ಅಚ್ಚರಿಯ ಸಂಗತಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮದುವೆ ವಿಡಿಯೋ ಫುಲ್ ವೈರಲ್ ಆಗಿದೆ. ಪೊಲೀಸರು ಇಬ್ಬರು ಯುವತಿಯರನ್ನು ವರಸಿದವನಿಗೆ ಶಾಕ್ ಕೊಟ್ಟಿದ್ದಾರೆ. ಹನಿಮೂನ್ಗೆ ಹೊರಟವನು ಹೋಗಿದ್ದು ಪೊಲೀಸ್ ಸ್ಟೇಷನ್ಗೆ. ರಿಂಕಿ-ಪಿಂಕಿ ಜತೆ ಅತುಲ್ ಮದ್ವೆ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ನೋಡಿ ವರನ ವಿರುದ್ಧ ಅಕ್ಲುಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯ್ತ. ಅತುಲ್ ವಿರುದ್ಧ ಐಸಿಪಿ ಸೆಕ್ಷನ್ 494 ಅಡಿ ಸೂರು ದಾಖಲಾಗಿದೆ.
ಇದನ್ನೂ ಓದಿ : ರಶ್ಮಿಕಾ ರೇಟು ಅಂದು 5 ಲಕ್ಷ.. ಇಂದು 5 ಕೋಟಿನಾ..?