ಬೆಂಗಳೂರು: ಸುಪ್ರೀಂ ಕೋರ್ಟ್ ಕೊಟ್ಟಿರುವ ಡೆಡ್ ಲೈನ್ ಸಮೀಪಿಸುತ್ತಿದೆ, ಕೋರ್ಟ್ ಡೆಡ್ ಲೈನ್ ಒಳಗೆ ಫೈನಲ್ ನೋಟಿಫಿಕೇಷನ್ ಹೊರಡಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ತಿಳಿಸಿದ್ದಾರೆ. ಈ ಮೂಲಕ ಅವರು ಬಿಬಿಎಂಪಿ ಚುನಾವಣೆ (BBMP Election) ಸಮೀಪಿಸುತ್ತಿರುವ ಸುಳಿವು ಕೊಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತುಷಾರ್ ಗಿರಿನಾಥ್ ಅವರು ರಾಜ್ಯ ಸರ್ಕಾರಕ್ಕೆ ಡಿ ಲಿಮಿಟೇಷನ್ ಫೈನಲ್ ಪ್ರತಿ ಕಳಿಸಿದ್ದೇವೆ, ಸುಪ್ರೀಂಕೋರ್ಟ್ ಕೊಟ್ಟಿರುವ ಡೆಡ್ ಲೈನ್ ಸಮೀಪಿಸುತ್ತಿದೆ, ಕೋರ್ಟ್ ಡೆಡ್ ಲೈನ್ ಒಳಗೆ ಫೈನಲ್ ನೋಟಿಫಿಕೇಶನ್ ಆಗುತ್ತೆ. ಆದಷ್ಟು ಬೇಗ ಡಿ ಲಿಮಿಟೇಷನ್ ಫೈನಲ್ ಆಗಲಿದೆ ಎಂದು ತಿಳಿಸಿದ್ಧಾರೆ.
ಇದನ್ನೂ ಓದಿ: ಪತನದ ಅಂಚಿನಲ್ಲಿ ಠಾಕ್ರೆ ಸರ್ಕಾರ.. ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಕಾರ್ಯಾಚರಣೆಯಲ್ಲಿ ರಮೇಶ್ ಜಾರಕಿಹೊಳಿ ಕೈವಾಡ..?
ಇನ್ನು ಇದೇ ವೇಳೆ ಬಿಬಿಎಂಪಿ ಕಚೇರಿಯಲ್ಲಿ ಕೌನ್ಸಿಲ್ ಅನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದೆ. ವಾರ್ಡ್ ಗಳ ಸಂಖ್ಯೆ 198 ರಿಂದ 243 ಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಕೌನ್ಸಿಲ್ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಪ್ರತಿ ಸದಸ್ಯನ ಆಸನದಲ್ಲಿ ಮೈಕ್ ಅಳವಡಿಕೆ, ಇಡೀ ಸಭಾಂಗಣಕ್ಕೆ ಸೌಂಡ್ ಪ್ರೂಫ್ ಅಕೌಸ್ಟಿಕ್ಸ್ ಅಳವಡಿಕೆ, ಕೌನ್ಸಿಲ್ ನಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಕಾರ್ಯ ನಡೆಯುತ್ತಿದೆ. ಇದೇ ವೇಳೆ ಕೌನ್ಸಿಲ್ ಸಭೆ ವೀಕ್ಷಿಸಲು ಸಾರ್ವಜನಿಕರಿಗೆ ಹಾಗೂ ಮಾಧ್ಯಮದವರಿಗೆ ಪ್ರತ್ಯೇಕ ಅಸನದ ವ್ಯವಸ್ಥೆ ಮಾಡಲಾಗುತ್ತಿದೆ.