ವಿಜಯಪುರ: ಹಿಜಾಬ್ ತೀರ್ಪು CJI ಕೋರ್ಟ್ಗೆ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದು, ಹಿಜಾಬ್ ಪ್ರಕರಣವನ್ನ ಇಡೀ ಪ್ರಪಂಚವೇ ಗಮನಿಸುತ್ತಿದೆ,ಹೆಣ್ಣು ಮಕ್ಕಳಿಗೆ ಬುದ್ದಿ ಹೇಳಿದಿದ್ರೆ ಈ ಪರಿಸ್ಥಿತಿ ಬರ್ತಿರಲಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ವಿಜಯಪುರ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ , ಹಿಜಾಬ್ ಪ್ರಕರಣವನ್ನ ಇಡೀ ಪ್ರಪಂಚವೇ ಗಮನಿಸ್ತಿದೆ, ಇಸ್ಲಾಂ ಧರ್ಮದಲ್ಲಿ, ಕುರಾನ್ನಲ್ಲಿ ಹಿಜಾಬ್ ಕಡ್ಡಾಯವಿಲ್ಲ. ಮುಸ್ಲಿಂ ಮುಖಂಡರು ಮಕ್ಕಳಿಗೆ ಬೈದು ಬುದ್ದಿ ಹೇಳ್ಬೇಕಿತ್ತು, ಹೆಣ್ಣು ಮಕ್ಕಳಿಗೆ ಬುದ್ದಿ ಹೇಳಿದಿದ್ರೆ ಈ ಪರಿಸ್ಥಿತಿ ಬರ್ತಿರಲಿಲ್ಲ,ಬೆಂಕಿ ಹಚ್ಚೋ ಕೆಲಸ ಆಗಿದ್ರಿಂದ ಪರಿಸ್ಥಿತಿ ಇಲ್ಲಿಗೆ ಬಂದಿದೆ, CJI ಪೀಠದಿಂದ ಏನು ಆದೇಶ ಬರುತ್ತೆಂದು ಕಾದು ನೋಡ್ಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಂಡ್ಯ ಮೂಲದ ಯುವಕನ ಮತಾಂತರ ಪ್ರಕರಣ.. ಮತ್ತಿಬ್ಬರು ಆರೋಪಿಗಳ ಬಂಧನ…!