ಬೆಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ ಹೋಗುವುದು ಸುಲಭವಲ್ಲ. ಏಕೆಂದರೆ ಅಲ್ಲಲ್ಲಿ ವಾಹನಗಳು, ಟ್ರಾಫಿಕ್ ಜಂಜಾಟ, ಸಿಗ್ನಲ್ ಇವೆಲ್ಲವನ್ನು ಎದುರಿಸಿ ಹೋಗಬೇಕೆಂದರೆ ಹಲವು ತಾಸುಗಳೇ ಬೇಕಾಗುತ್ತದೆ. ಆದರೆ ಈಗ ಏರ್ಪೊರ್ಟ್ ಪ್ರಯಾಣಿಕರಿಗೆ ಸೌಥ್ ವೆಸ್ಟರ್ನ್ ರೈಲ್ವೇ ಗುಡ್ ನ್ಯೂಸ್ ಕೊಟ್ಟಿದೆ.
ಇಂದಿನಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ “ಡೆಮು” ರೈಲು ಸಂಚಾರ ಶುರುವಾಗಲಿದೆ. ಇಂದು ಬೆಳಗ್ಗೆ 4.45ಕ್ಕೆ ಏರ್ಪೋರ್ಟ್ ರೈಲ್ವೆ ನಿಲ್ದಾಣಕ್ಕೆ ಮೊದಲ ರೈಲು ಹೊರಟಿದೆ. ಕೆಎಸ್ಆರ್ ನಿಲ್ದಾಣದಿಂದ 4, ಯಲಹಂಕದಿಂದ 1 ರೈಲು ಏರ್ ಪೋರ್ಟ್ಗೆ ಸಂಚಾರ ಕೈಗೊಳ್ಳಲಿದೆ. ನಿತ್ಯ ಏರ್ಪೋರ್ಟ್ನಿಂದ ಬೆಂಗಳೂರು ಸಿಟಿ ಮಾರ್ಗದಲ್ಲಿ 5 ಜೋಡಿ ರೈಲುಗಳು ಸಂಚಾರ ನಡೆಸಲಿದ್ದು, 10 ರೂಪಾಯಿ ಟಿಕೆಟ್ ದರದಲ್ಲಿ ಆರಾಮದಾಯಕ ಸಂಚಾರ ಮಾಡಬಹುದು. 30 ಸಾವಿರಕ್ಕೂ ಹೆಚ್ಚು ಜನರಿಗೆ ಇದ್ರಿಂದ ಅನುಕೂಲ ಆಗಲಿದೆ.
ಸಾವಿರಾರು ರೂ.ಗಳನ್ನು ಖರ್ಚು ಮಾಡಿ ಕ್ಯಾಬ್ ಮಾಡಿಕೊಂಡು ಹೋಗುವ ಬದಲಿಗೆ, 10 ರೂಪಾಯಿಯಲ್ಲಿ ಪ್ರಯಾಣ ಮುಗಿದುಬಿಡುತ್ತದೆ. ಹಣದ ಉಳಿತಾಯ ಜೊತೆಗೆ ಸಮಯದ ಉಳಿತಾಯವೂ ಆಗಲಿದೆ.