ಬೆಂಗಳೂರು : ಅಮ್ಮ ಎನ್ನುವ ಪದದಲ್ಲಿ ಏನೋ ಒಂದು ಶಕ್ತಿ ಇದೆ. ಎಂತಹ ನೋವಿದ್ದರೂ ಅಮ್ಮನ ಪ್ರೀತಿ ಮುಂದೆ ಅದೆಲ್ಲ ಸಂಪೂರ್ಣವಾಗಿ ನಾಶವಾಗಿ ಹೋಗುತ್ತೆ. ಹೀಗಾಗಿ ಅಮ್ಮನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆಕೆಯನ್ನು ಹೊಗಳಲು ಪದಗಳಿಲ್ಲ. ತಾಯಿಯು ತನ್ನ ಮಗುವಿಗೆ ತೋರಿಸುವ ಪ್ರೀತಿ, ಕಾಳಜಿ ಮತ್ತು ತ್ಯಾಗವನ್ನು ಪ್ರಶಂಸಿಸಲು ಪ್ರತಿ ವರ್ಷ ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಮೇ ತಿಂಗಳ 2ನೇ ಭಾನುವಾರದಂದು ಆಚರಿಸಲಾಗುತ್ತದೆ. ಈ ಬಾರಿಯ ತಾಯಂದಿರ ದಿನವನ್ನು ಮೇ 8ರಂದು ಆಚರಿಸಲಾಗುತ್ತದೆ.
ಅಮ್ಮಂದಿರ ದಿನದಂದು ತಮ್ಮ ತಾಯಿಗೆ ವಿಶೇಷವಾದದ್ದನ್ನು ನೀಡಲು ಪ್ರಯತ್ನಿಸುತ್ತಾರೆ. ಅಮ್ಮನಿಗೆ ಏನು ಕೊಡಬೇಕೆಂದು ಎಂದು ಆಲೋಚನೆಯಲ್ಲಿ ಮುಳಿಗಿರುತ್ತಾರೆ. ಕೆಲವೊಂದು ಉಡುಗೊರೆ ಮತ್ತು ಐಡಿಯಾಗಳನ್ನು ನಾವ್ ತಿಳಿಸಿಕೊಡುತ್ತೇವೆ ಮಿಸ್ ಮಾಡದೇ ಈ ಸ್ಟೋರಿ ಓದಿ.
ಹೂವಿನ ಬೊಕೆಗಳು: ಪ್ರತಿಯೊಬ್ಬರಿಗೂ ಮುದ್ದಾದ ಹೂವಿನ ಗುಚ್ಛವನ್ನ ಇಷ್ಟಪಡುತ್ತಾರೆ. ಇನ್ನು ತಾಯಂದಿರಿಗೆ ಇಷ್ಟವಾಗದೇ ಇರದು. ಸ್ಪ್ರೇ ಗುಲಾಬಿಗಳು, ಲಿಲ್ಲಿಗಳು ಮತ್ತು ನಿಮ್ಮ ತಾಯಿ ಇಷ್ಟಪಡುವ ಹೂಗಳನ್ನು ಹೊಂದಿರುವ ಬೊಕೆ ಕೊಟ್ಟು ನೋಡಿ.
ಸೀರೆ : ಎಲ್ಲಾ ಗಿಫ್ಟ್ಗಳಿಗಿಂತ ಹೆಚ್ಚು ಭಾವನಾತ್ಮಕ ಗಿಫ್ಟ್ ಅಂದ್ರೆ ಸೀರೆ.. ಅಮ್ಮಂದಿರಿಗೆ ಸೀರೆ ಅಂದರೆ ಬಹಳ ಇಷ್ಟ. ಮಗಳು ತಾಯಿಗೆ ನೀಡುವ ಸೀರೆ ಹೇಗೆ ಇದ್ದರೂ ಅದು ಫೇವರೇಟ್ ಆಗಿರುತ್ತದೆ. ನೀವು ನಿಮ್ಮ ಅಮ್ಮನಿಗೆ ಸೀರೆ ಕೊಟ್ಟರೆ ಆಕೆ ಪುಲ್ ಖುಷಿ ಪಡುತ್ತಾಳೆ.
ಗಿಫ್ಟ್ ಕಾರ್ಡ್: ಉಡುಗೊರೆ ಕಾರ್ಡ್‌ಗಳು ಲಭ್ಯವಿದ್ದಾಗ ಏಕೆ ತಲೆಕೆಡಿಸಿಕೊಳ್ಳಬೇಕು? ನೀವೆ ನಿಮ್ಮ ಕೈಯಾರೆ ಕಾರ್ಡುಗಳನ್ನು ಮಾಡಿ ಕೊಡಬಹುದು ಅಥವಾ ಅಂಗಡಿಯಲ್ಲಿ ಸಿಗುವ ವಿಶೇಷ ಕಾರ್ಡ್ಗಳ ಮೇಲೆ ಪ್ರೀತಿಯ ಕೆಲ ಪದಗಳನ್ನು ಬರೆದು ಕೊಟ್ಟರೆ ತಾಯಿಗೆ ಖುಷಿಯಾಗದೇ ಇರದು.
ಆಭರಣಗಳು : ಆಭರಣಗಳು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬ ಮಹಿಳೆಯೂ ಒಂದೆಲ್ಲ ಒಂದು ರೀತಿಯ ಆಭರಣಗಳನ್ನು ಇಷ್ಟಪಡುತ್ತಾರೆ. ನೀವು ಸಹ ನಿಮ್ಮ ಅಮ್ಮನಿಗೆ ರಿಂಗ್ ಅಥವಾ ಕಿವಿ ಓಲೆ ಉಡುಗೊರೆಯಾಗಿ ನೀಡಿ.
ಪರ್ಫ್ಯೂಮ್ ಸೆಟ್ : ನಿಮ್ಮ ಅಮ್ಮ ಪರ್ಫ್ಯೂಮ್ಗಳನ್ನು ಇಷ್ಟಪಡುತ್ತಿದ್ದಾರೆ, ಅವುಗಳ ಸೆಟ್ ನಿಜಕ್ಕೂ ಬೆಸ್ಟ್ ಗಿಫ್ಟ್ ಆಗುತ್ತದೆ. ವಿಭಿನ್ನ ಫರ್ಫ್ಯೂಮ್ಗಳನ್ನ ಹೊಂದಿರುವ ಹಲವಾರು ಸೆಟ್ಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ ಅವುಗಳನ್ನು ಅಮ್ಮನಿಗೆ ಕೊಟ್ಟು ಸಂತೋಷ ಹಂಚಿಕೊಳ್ಳಿ.
ಬ್ಯಾಗ್: ನಿಮ್ಮ ತಾಯಿ ವಿವಿಧ ಬಗೆಯ ಬ್ಯಾಗ್ಗಳನ್ನ ಇಷ್ಟಪಡುವುದಾದರೆ ನಿಮ್ಮ ಚಿಂತೆಗೆ ಪರಿಹಾರ ಸಿಕ್ಕಂತೆ. ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ಬ್ಯಾಗ್ ಗಳು ಸಿಗುತ್ತವೆ. ನಿಮ್ಮ ಅಮ್ಮನ ಇಷ್ಟದ ಕಲರ್ನ ನೆಚ್ಚಿನ ಬ್ರ್ಯಾಂಡ್ ಬ್ಯಾಗ್ ಗಿಫ್ಟ್ ನೀಡಿ..