ಟಾಲಿವುಡ್ನ ಮಹಾ ನಟಿ ಕೀರ್ತಿ ಸುರೇಶ್ ಬೆಂಗಳೂರಿಗೆ ಬಂದಿದ್ದಾರೆ. ಅಚ್ಚರಿ ಎಂದರೆ, ಟಾಲಿವುಡ್ನ ಈ ನಟಿ ರಾಜ್ಕುಮಾರ್ ಕುಟುಂಬವನ್ನ ಭೇಟಿ ಮಾಡಿದ್ದಾರೆ. ಆ ವೇಳೆ ತೆಗೆದ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಹೌದು, ಕೀರ್ತಿ ಸುರೇಶ್ ಬೆಂಗಳೂರಿಗೆ ಬಂದಿದ್ದಾಗ ರಾಘವೇಂದ್ರ ರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಆಗ ರಾಘವೇಂದ್ರ ರಾಜ್ ಕುಮಾರ್ ಹಾಗೂ ಪತ್ನಿ ಮಂಗಳಾ ರಾಘವೇಂದ್ರ ಜೊತೆ ಫೋಟೋ ತೆಗೆಸಿಕೊಂಡಿದ್ದು ಈಗ ಎಲ್ಲೆಡೆ ಫುಲ್ ವೈರಲ್ ಆಗುತ್ತಿದೆ.
ಇದನ್ನೂ ಓದಿ : ದಾರಿಹೋಕನ ಹೊಟ್ಟೆ ಸೀಳಿದ ಗುಂಡು: ಪೈನಾನ್ಸಿಯರ್ ಮಾಡಿದ ಯಡವಟ್ಟು
ಈ ಫೋಟೋ ಕೊರೋನಾ ವೈರಸ್ ಕಾಣಿಸಿಕೊಳ್ಳುವುದಕ್ಕೂ ಮೊದಲು ತೆಗೆದಿದ್ದು ಎನ್ನಲಾಗುತ್ತಿದೆ. ಯಾಕಂದ್ರೆ ಕೊರೋನಾ ಇರುವುದರಿಂದ ಎಲ್ಲರೂ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಇನ್ನು, ಸಿನಿಮಾ ಕೆಲಸಗಳು ಕೂಡ ನಿಂತಿವೆ. ಹೀಗಾಗಿ, ಇದು ಹಳೆಯ ಫೋಟೋ ಎನ್ನಲಾಗುತ್ತಿದೆ.
ಇದನ್ನೂ ಓದಿ : ವರ ಮಹಾಲಕ್ಷ್ಮಿ ಹಬ್ಬಕ್ಕೆ ಲಕ್ಷ್ಮಿ ಭಕ್ತರಿಗೆ ಭಾರೀ ಶಾಕ್..! ಹಬ್ಬಕ್ಕೂ ಸಿಗಲ್ವಾ ವರಲಕ್ಷ್ಮಿ ದರ್ಶನ ಭಾಗ್ಯ..?
ಇನ್ನು ಇದೊಂದು ಸೌಹಾರ್ದಯುತ ಭೇಟಿಯಾಗಿದ್ದು, ಸಿನಿಮಾ ವಿಚಾರಕ್ಕೆ ಸಂಬಂಧ ಇಲ್ಲ ಎನ್ನಲಾಗಿದೆ.ಡಾ. ರಾಜ್ ಕುಮಾರ್ ಅವರು ಸಮಯದ ಗೊಂಬೆ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿರ್ವಹಿಸಿದ್ದರು. ಈ ಚಿತ್ರದಲ್ಲಿ ಕೀರ್ತಿ ಸುರೇಶ್ ತಾಯಿ ಅವರ ತಂಗಿಯಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಮೊದಲಿನಿಂದಲೂ ಅಣ್ಣಾವ್ರು ಹಾಗೂ ಕೀರ್ತಿ ಸುರೇಶ್ ಕುಟುಂಬಕ್ಕೆ ನಂಟು ಬೆಳೆದು ಬಂದಿದ್ದೆ ಎನ್ನಲಾಗುತ್ತಿದೆ…
ಇದನ್ನೂ ಓದಿ : ಶ್ರಾವಣ ಸೋಮವಾರದ ಮಹತ್ವ, ಪೂಜೆ ಹಾಗೂ ಮಂತ್ರಗಳು,ಇದು ಪ್ರತಿಯೊಬ್ಬರೂ ತಿಳಿದುಕೊಳ್ಳಲೇ ಬೇಕಾದ ಮಾಹಿತಿ
Actress